ಬರುತಿಹಳು ಎನ್ನ ಮನದನ್ನೆ
ತೋರುತಾ ಅವಳ ಗುಳಿಕೆನ್ನೆ||

 
ಮನದಾಸೆ ತಿಳಿದಿಹಳು
ತಿಳಿಯದ೦ತಯೇ ಇರುತಿಹಳು
ಪ್ರೀತಿಯ ನನ ನೋಟಕೆ
ಕೊಡುತಿರುವಳು ಉತ್ತರವ ಆಕೆ ||

 
ಮಾತನೇನು ಆಡಿಸಲೇ
ನೋಡುತಲೆ ಸಮಯ ಕಳೆಯಲೆ
ಸನಿಹ ಹೋಗಿ ಸ್ಪರ್ಷಿಸಲೇ
ಆಸೆಯನು ಬಚ್ಚಿಟ್ಟುಕೊಳ್ಳಲೇ ||

 
ಹೇ ಸಮಯವೇ ಏಕೆ ಓಡುವೆ
ಮನದನ್ನೆಗೆ ನಾ ಮಾತಾಡುವೆ 
ಅವಳ ಜೊತೆಯಲೇ ಜೀವನ ಕಳೆವೆ
ನೀನೊಮ್ಮೆ ನಿ೦ತರೆ ನನ ಪ್ರೀತಿಯ ನಿವೇದಿಸುವೆ||