ತಾನಾಗೇ ಬರುವುದು ತನ್ಮಯತೆ,
ತಳ್ಳಿದರೆ ತನುವಿನ ಚಂಚಲತೆ.
ತನ್ನದಾಗಿಸಿಕೊಂಡಿದ್ದನ್ನೇ ಹೊತ್ತು ಹೋಗುವುದಿಲ್ಲವಂತೆ
ತರವಲ್ಲ ಈ ಮದ್ಯೆ ಪರರ ಚಿಂತೆ
ತಗಡಿನ ಗೊಂಬೆಯಾಗಿಬಿಡು ಜೀವನ ಸಂತೆ
ತಕರಾರು ಬಿಡು ಅರಿವಾಗುವುದು ಜಗದ ಶೂನ್ಯತೆ
ತನ್ತನವ ಬಿಟ್ಟು ಕೊಡದಿರು
ತನ್ತನದಿಂದ ಮೆರೆದಾಡದಿರು
ತನ್ನವರಿಹರೆಂದು ಮರೆಯದಿರು
ತಾಳ್ಮೆಯ ಬಲಿಕೊಡದಿರು
ಬೋ .ಕು .ವಿ
ಚಿತ್ರ ಕೃಪೆ : ಗೂಗಲ್ ನ ತೊಗಲು ಗೊಂಬೆಯಾಟದ ಚಿತ್ರಗಳು
ತ --ತನ್ಮಯತೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!