ಆಸೆ ಪಟ್ಟರೆ ಸಾಲದು

ಗುರಿಯ ಇಟ್ಟರೆ ಆಗದು

ಸಾಧಿಸುವ ಛಲ ಬೇಕು ಮನದಿ

ಗೆಳೆಯ ಸಾಧಿಸುವ ಛಲ ಬೇಕು ಮನದಿ

ಬೆಟ್ಟ ಹತ್ತುವೆನಂಬ

ಬಂಡೆ ಸೀಳುವೆನೆಂಬ

ಕನಸ ಕಂಡರೆ ಸಾಲದು ಗೆಳೆಯ

ಸಾಧಿಸುವ ಛಲ ಬೇಕು ಮನದಿ

ಹೊತ್ತು ಮುಳುಗುವ ಮುನ್ನ

ತುತ್ತನು ದುಡಿಯದೆ ಹೋದರೆ

ವಡಲನೆ ಸುಡುವುದು ಹಸಿವು ಗೆಳೆಯ

ವಡಲನೆ ಸುಡುವುದು ಹಸಿವು ಗೆಳೆಯ

ಕಾಲದ ವೇಗಕ್ಕೆ ಹೆದರಿ ಕೊರಗಿ

ಕುರಲೆ ಬೇಡ ಕಾಲವು ಕಾಯುವುದಿಲ್ಲ ನಿನಗೆ

ಗೆಳೆಯ ಕಾಲವು ಕಾಯುವುದಿಲ್ಲ ನಿನಗೆ