ಅಹಂ ಬ್ರಹ್ಮಾಸ್ಮಿ !

ವೇದೋಪನಿಷತ್ತಿನ ಮೇರುವಾಕ್ಯ

ಋಷಿ ಮುನಿ ಉಸಿರಲಿ ನಿತ್ಯಐಕ್ಯ

ಜಗವೆಲ್ಲಾ ಮಿಥ್ಯ ದೇವನೊಬ್ಬನೇ ಸತ್ಯ

ಅಮರ ಸಂದೇಶ ಸಾರಿದ ಸಂತರಿಗೆ ಚಿರ ಧನ್ಯ .

ವಿಷಯಾಸಕ್ತ ಮನ ಮೋಹ ಮಾತ್ಸರ್ಯ ಮದ

ಆವರಿಸಿದೆ ಬುದ್ಧಿ ಅಜ್ಞಾನದ ಕಲ್ಮಷ

ಸಾಧು ಸಂತರ ನುಡಿ ಬರಹ ಸತ್ಸಂಗ

ರಾಗದ ಧೂಳು ಝಾಡಿಸಿ ವಿರಾಗ ಪರಿಮಳ ಹರವಿ

ಮೂಡಿಸಿದೆ ಹೃದಯದಲಿ ಅಧ್ಯಾತ್ಮ ಉನ್ಮಾದ .

ಎಂಥ ಭ್ರಮೆ ! ಎಂಥ ''ಅಹಂ"ತೆ !ಎಲ್ಲವೂ ನಮಗಾಗಿ

ತಿಳಿಯಾಗಲಿ ಮನ ಅಸತ್ಯ ಅಜ್ಞಾನ ಮುಸುಕಿನಿಂದ

ಅದೇ ಮನೋವಿಕಾಸ -ದೇವ ದರ್ಶನ ! ಆತ್ಮಾನುಭವ !

ಅರಳಲಿ ಚಿತ್ತು ! ಕ್ರಿಯಾಯೋಗ ಆಚರಣೆಯಲಿ

ಅನುಭವಿಸಲಿ ಅಧ್ಯಾತ್ಮ ಅರುಣೋದಯ !

ಶ್ರೀ ನಾಗರಾಜ್