ನನ್ನ ಉಸಿರಾಗಿ

ನನ್ನ ಜೀವನಾಡಿಯಾಗಿ

ಸಲುಹಿರುವೆ ಈ ತನಕ

ಓ ಗುರು ರಾಘವೇಂದ್ರ

ಮುಂದೆಯೂ ಸಲಹು ಶ್ರೀ ಗುರುವೇ

 

ಬಂದಿರುವೆ ಹೇಗೋ ಈ ಲೋಕದಿ

ಕರ್ಮಫಲ ಬಂಧಿಯಾಗಿ

ಸಂಯೋಗ ವಿಯೋಗ ಚಕ್ರವ್ಯೂಹದಲಿ

ಸಿಲುಕಿರುವ  ಎನಗೆ

ಕರುಣಿಸು ನಿನ್ನ ಚರಣದಾಸಯೋಗ

 

ನೀನೇ ಸರ್ವಲೋಕ ಹಿತೈಷಿ

ಭವರೋಗ ಹರಣ  ವೈದ್ಯನು

ಪರಿಹರಿಸು ಈ ಮಾಯಾ ವಾಸನಾ

ಈ ಸಂಸಾರಚಕ್ರದಿ ಮುಕ್ತಗೊಳಿಸು

ಸರ್ವಶಕ್ತ ಶ್ರೀ  ಗುರುವೇ ಓ ಗುರುವೇ

 

ಶ್ರೀ ನಾಗರಾಜ್