ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ  ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ ದಾರಿಯಲ್ಲಿ ಒಬ್ಬರೇ ಸಾಗುತ್ತಾರೆ. ಧರ್ಯ, ಜೀವನಪ್ರೀತಿ ಮತ್ತು ಎಲ್ಲವನ್ನೂ ತನಗೆ ತಾನೇ ಗ್ರಹಿಸಿ ತಿಳಿದುಕೊಳ್ಳುವ ಪರಿ ಅವರ ಜೀವನವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಇಂಗ್ಲಿಷ್ ಶಿಕ್ಷಕ. ಆರಿಸಿಕೊಂಡ ವಿಷಯ : ಫಿಲೊಸೊಫಿ. ಆದರೆ ಅವರು ಮಾಡಿದ ಕೃಷಿ ಕನ್ನಡ ಕಾದಂಬರಿಗಳನ್ನು ರಚಿಸುವುದರ ಮೂಲಕ. ಬರೆದ ೨೪ ಕಾದಂಬರಿಗಳೂ ಅವರ ಜೀವನದ ಅನುಭವದ ಕ್ಷಣಗಳನ್ನು ಹರಳುಗಟ್ಟಿಸಿ ಹೆಣೆದ ದಿವ್ಯ ವಸ್ತ್ರಗಳು. 

ಈಗ ಭೈರಪ್ಪನವರ ಅಸಂಖ್ಯ ಓದುಗರು ತಮ್ಮ ಪ್ರೀತಿಯ ಧಾರೆಯನ್ನು ಒಂದು ಪುಸ್ತಕದಲ್ಲಿ ಅಡಗಿಟ್ಟಿಸಿರುವ ಹೊತ್ತಿಗೆ ಎಂದರೆ ಡಾ. ಎಂ. ಎಸ್. ವಿಜಯಾ ಹರನ್ ರವರು ಸಂಪಾದಿಸಿ ಹೊರತಂದ 'ನಮ್ಮ ಭೈರಪ್ಪನವರು' ! ಇವರ ಬಗ್ಗೆ ಬರೆದ ನುಡಿನಮನ.  ಇದರಲ್ಲಿ ಕೇವಲ ೧೦೬ ಪ್ರೀತಿಯ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಬಂದ ಪತ್ರಗಳು ಅಪಾರ ಸಂಖ್ಯೆಯಲ್ಲಿ. ಹಿರಿಯ ಕನ್ನಡ ವಿದ್ವಾಂಸ, ಭಾಷಾಂತರ  ತಜ್ಞ ಡಾ. ಪ್ರಧಾನ ಗುರುದತ್ತರು ಹಿನ್ನುಡಿ ಬರೆದಿದ್ದಾರೆ. ಪುಸ್ತಕದಲ್ಲಿ ವಿದ್ವಾನ್ ಡಾ. ಎಚ್. ವಿ. ನಾಗರಾಜರಾವ್, ಡಾ. ವಸುಂಧರಾ ದೊರೈಸ್ವಾಮಿ, ಡಾ. ಉಮಾ. ವಿ. ಕುಲಕರ್ಣಿ,ಉಮಾ ರಾಮರಾವ್,ನಾಗಲಕ್ಷ್ಮೀ ಹರಿಹರೇಶ್ವರ, ಸಂಸ್ಕೃತಿ ಸುಬ್ರಹ್ಮಣ್ಯ, ವಿದ್ವಾನ್ ಜಿ. ಎಸ್. ನಟೇಶ್, ಮೊದಲಾದರು ಭೈರಪ್ಪನವರ ಕೃತಿಗಳನ್ನು ಓದಿ ಅದರ ಬಗ್ಗೆ  ತಮ್ಮ ಅನುಭವಗಳನ್ನು ಬರೆದಿದ್ದಾರೆ. 

೨೦೧೯ ರಲ್ಲಿ ಎಸ್ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ರೂಪುಗೊಂಡಿದೆ. ಶಿಕ್ಷಣ, ಸಾಹಿತ್ಯ, ಕಲಾಕ್ಷೇತ್ರಗಳಲ್ಲಿ ಜ್ಞಾನ ಪ್ರಸರಣ ಹೆಚ್ಚಿಸುವುದು ಮತ್ತು ಭೈರಪ್ಪನವರ ಅಮೋಘ ಕಾದಂಬರಿಗಳನ್ನು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಹೊರತರುವ ಮಹಾದೋದ್ದೇಶವಿದೆ. 

ಡಾ. ಭೈರಪ್ಪನವರ ಪ್ರಿಯ ಓದುಗರು ಬೇಕಾದರೆ ಕೆಳಗೆ ಕೊಟ್ಟಿರುವ ಪುಸ್ತಕ ವ್ಯಾಪಾರಿಗಳನ್ನು  ಸಂಪರ್ಕಿಸಿ ಮೇಲಿನ ಪುಸ್ತಕವನ್ನು ಅಂಚೆಯಲ್ಲಿ ಪಡೆಯಬಹುದು.

ಸಂಕೃತಿ ಬುಕ್ ಪ್ಯಾರಡೈಸ್ 

 # ೯೦೯ /೧ ಬಿ. ಪದ್ಮ, ಮೊದಲನೆಯ ಮಹಡಿ. 

೧ ನೆಯ ಮುಖ್ಯ ರಸ್ತೆ, ಲಕ್ಷ್ಮೀ ಪುರಂ, ಮೈಸೂರು -೫೭೦ ೦೦೪

ಮೊ : ೯೮೮೬೧೭೫೦೧೦/೯೪೪೮೦ ೩೭೭೬೨

e-mail : [email protected]