ಉದ್ದದಿ ಬೆಳದು ನಿಂತಿಹ
ಗೆದ್ದಿಹ ಹೆಣ್ಣಿನ ಮನವ ಮಲ್ಲಿಗೆ
ಮೆದ್ದಿಹ ಗಂಧ ಪರಿಮಳ
ಸದ್ದನು ಮಾಡದೆ ಮೌನ ಧರಿಸುತ
ಮಲ್ಲಿಗೆ ಹೂವು ವಾಸನೆ
ಮೆಲ್ಲಗೆ ಸೆಳೆದಿದೆ ಗಮನ ತನ್ನೆಡೆ
ಬಲ್ಲೆನು ನಾನು ಹೂವನು
ಚೆಲ್ಲುವ ಪರಿಮಳದಂದದ ಸೊಗಸು
ಬೆಳಗಿನ ಜಾವವರಳುದು
ತೆಳುವಿನ ಬುಡದಲುದ್ದದಲಿ ನಲಿಯುತ
ಬೆಳೆವದೆತ್ತರದಿ ತರುವಲಿ
ಹೊಳೆಯುತ ಗಗನದಿ ಜೋತು ಬೀಳುತ
ಗೌರವರ್ಣದಲಿ ಕಾಣುತ
ನೂರು ಭಾವಗಳನ್ನು ಹೊತ್ತು ಬಂದಿದೆ
ತೋರುತ ನಲುಮೆಯನ್ನಿಂದು
ಚಾರುಹಾಸದೊಳಿಂದು ತಾನು ಮಿಂದಿದೆ
ಘಂಟೆಯಾಕಾರ ವಾಲಿದೆ
ತಂಟೆಯ ಮಾಡದೆ ಮರದಿ ಕೊನರಿದೆ
ನಂಟನು ಬೆಳೆಸಿ ಹೆಣ್ಮನ
ಕಂಟುತ ತರುವನು ಶೋಭಿಸುತ್ತಿದೆ
-ಶಂಕರಾನಂದ ಹೆಬ್ಬಾಳ
ಚಿತ್ರ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!