ನನ್ನೆದುರಿಗೆ ಬರಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
ನಗುವನ್ನು ತೋರಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
ಹಾಳು ಹಳೆಯ ನೆನಪುಗಳ
ಮಾಲೆಯದು
ಒಲವನ್ನು ಬೇಡಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
ಕುಗುರಿನಲ್ಲಿ ಹೃದಯವನ್ನು ಕದ್ದು
ಹೋಗದಿರು
ಮಗುವಿನಂತೆ ಅಳಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
ಒನಪು ವೈಯಾರವು ನನಗೆ ಎಳ್ಳಷ್ಟು
ಬೇಕಾಗಿಲ್ಲ
ಕನಸುಗಳಲ್ಲಿ ಕೊಲ್ಲಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
ಅಭಿನವನ ಮನವೆಂಬ ಕನ್ನಡಿ
ಚೂರಾಗಿದೆ
ಕಣ್ಣೆದುರು ಹಾಯಬೇಡ ನಿನ್ನನ್ನು
ಕೈಬಿಟ್ಟಿದ್ದೇನೆ
-*ಶಂಕರಾನಂದ ಹೆಬ್ಬಾಳ*
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!