ಸ್ನೇಹಿತರೆ,
ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ ಕೊನೆಯಲ್ಲಿ ಸರ್ವರಿನ ಹಾರ್ಡ್ವೇರ್ ಕ್ಷಮತೆ ಹೆಚ್ಚಿಸುತ್ತಿದ್ದೇವೆ. ಆದರೆ ಎಲ್ಲೆಡೆಯಿಂದ ಇದನ್ನು ಉತ್ತಮಪಡಿಸಲು ನಿಮ್ಮೆಲ್ಲರ ಭಾಗವಹಿಸುವಿಕೆಯ ಅಗತ್ಯವುಂಟು.
ಮೊದಲಾಗಿ ಸಂಪದದ ಕಂಟೆಂಟ್ ಮೇಲೊಂದು ಕಣ್ಣಿಟ್ಟು ಮಾಡರೇಟ್ ಮಾಡುವಲ್ಲಿ ಆಸಕ್ತಿಯುಳ್ಳವರು ದಯವಿಟ್ಟು ನನ್ನನ್ನು ಸಂಪರ್ಕಿಸಿ. ಆಸಕ್ತಿಯುಳ್ಳವರು ಸಕ್ರಿಯ ಸದಸ್ಯರಾಗಿರಬೇಕು.
ಎರಡನೆಯದಾಗಿ ಸರ್ವರ್ optimize ಮಾಡಿ ಅಭ್ಯಾಸವಿರುವ ತಂತ್ರಾಂಶ ತಜ್ಞ ಓದುಗರಿದ್ದಲ್ಲಿ ದಯವಿಟ್ಟು ಶಶಿಯವರನ್ನು ಸಂಪರ್ಕಿಸಿ.
(ನಾವು ಬಳಸುತ್ತಿರುವ ಸರ್ವರ್ Apache, ಡೇಟಬೇಸ್ MySQL - ಬಳಸುತ್ತಿರುವ ಪ್ರತಿಯೊಂದೂ ಮುಕ್ತ ತಂತ್ರಾಂಶ).
ಮೂರನೆಯದಾಗಿ ಸಂಪದವನ್ನು ಉತ್ತಮಪಡಿಸುವತ್ತ ನಿಮ್ಮ ಸಲಹೆ, ಅಭಿಪ್ರಾಯಗಳನ್ನು ತಪ್ಪದೆ ಕಳುಹಿಸಿಕೊಡಿ. ಈಗಾಗಲೇ ಕಳುಹಿಸಿಕೊಟ್ಟವರಿಗೆ ನಮ್ಮೆಲ್ಲರ ವಂದನೆಗಳು - ಬಂದಿರುವ ಸಲಹೆ ಅಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಸಂಪದದ ಹೊಸ ರೂಪದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ.
ಈ ಕನ್ನಡ ಸಮುದಾಯ ಅಂತರ್ಜಾಲದಲ್ಲಿರುವ ಇತರ ಭಾಷೆಗಳ ಸಮುದಾಯಗಳಿಗಿಂತ ಉತ್ತಮ ಸಮುದಾಯವಾಗಿಸುವತ್ತ ಹೆಜ್ಜೆಯಿಡಬೇಕಾದರೆ ನಿಮ್ಮೆಲ್ಲರ ಭಾಗವಹಿಸುವಿಕೆ ಅತ್ಯಗತ್ಯ.
(ಇವೆಲ್ಲ ಧಿಡೀರ್ ಈಗ್ಯಾಕೆ ಎಂಬ ಪ್ರಶ್ನೆಗೆ ಕ್ಯಾಲೆಂಡರ್ ಉತ್ತರ ನೀಡಬಹುದು - ಸಂಪದ ಪ್ರಾರಂಭವಾಗಿ ಸರಿಯಾಗಿ ಎರಡು ವರ್ಷವಾಗುತ್ತ ಬಂತು, ಈಗ ಒಮ್ಮೆ ಬ್ರೇಕ್ ಹಾಕಿ ಮುಂದಿರುವ ಹಾದಿಗೆ ರೆಡಿಯಾಗಿ ಮುಂದುವರೆಯೋಣ).
P.S: ಸಂಪದದ ಸರ್ವರಿನ ಈ ವರ್ಷದ (೨೦೦೬-೨೦೦೭) ಬಿಲ್ ಕಟ್ಟುವಲ್ಲಿ ನೀವೂ ಸಹಾಯಮಾಡಬಹುದು. ವಿವರ ಇಲ್ಲಿದೆ. ಕ್ರೆಡಿಟ್ ಕಾರ್ಡ್ ಬಳಸದವರು ಡೆಬಿಟ್ ಕಾರ್ಡ್ ಬಳಸಬಹುದು.
ಸದ್ಯಕ್ಕೆ ಪೇಪಾಲ್ ಮೂಲಕ ಕಳುಹಿಸಿದರೇ ನಮಗೆ ನೇರ ಬಿಲ್ ಪಾವತಿ ಮಾಡಲು ಸುಲಭ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!