ಅಂದವೋ...ಚಂದವೋ...
ಆ.....ನಂದವೋ.......
ರಾಧಾ ಮಾಧವರ ಈ
ಒಲವು... ನಲಿವು...
ಬೆಳದಿಂಗಳ ಚಂದಿರ ರಾಧೆಯಲ್ಲಿ
ಚೆಲುವಿನದರ ಬಿಂಬವು ಕೃಷ್ಣನಲ್ಲಿ
ಹಾಲು ಬಿಳುಪಿನ ಶಿಲೆಯ ಮೂರ್ತಿಯಲ್ಲಿ
ಕಂಗೊಳಿಪ ರಾಧಾಕೃಷ್ಣರು
ಮನಸಿನಲ್ಲಿ.
ಮನಮೋಹಕ ಚೆಲುವಿನ
ಸಿರಿಯು ಅಲ್ಲಿ
ಮರ ಗಿಡ ಹೂ ಬಳ್ಳಿ ಹಂದರದಲ್ಲಿ
ಕಾಮಧೇನು ನವಿಲ ಚೆಲುವು
ಅಂದದಲ್ಲಿ
ಹರೇರಾಮ ಹರೇಕೃಷ್ಣ ನಾಮವು ಉಸಿರುಸಿರಿನಲ್ಲಿ.
ಮಧುರ ನಿನಾದವು ಕೊಳಲಿನಲ್ಲಿ
ಗಾನ ಸುಧೆಯು ಹರಿಯುತಿದೆ
ನಾದದಲ್ಲಿ
ಕನಕ ಮಂಟಪದ ನಡುವಿನಲ್ಲಿ
ನಿಂತ ಚೆಲ್ವ ರಾಧಾಕೃಷ್ಣರು
ಕಂಗಳಲ್ಲಿ.
-ವೀಣಾ ಕೃಷ್ಣಮೂರ್ತಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!