ಆ ದಿನ ರಾತ್ರಿ ನಮ್ಮ ಮನೆಯ ನಾಯಿ ಟಾಮಿ ಒಂದೇ ಸಮನೆ ಆಕಾಶದತ್ತ ಮುಖಮಾಡಿ ಬೊಗಳುತ್ತಿತ್ತು. ನಾನು ಬಾಗಿಲು ತೆರೆದು ನೋಡಿದೆ ಅಂಗಳದಲ್ಲಿ ಯಾರೂ ಕಾಣಲಿಲ್ಲ. ಒಳಗೆ ಹೋಗಿ ಕನ್ನಡಿ ಮುಂದೆ ನಿಂತಾಗ ನನ್ನ ಮುಖ ಚೆಂಡಿನಂತೆ ಬಾತಿರುವುದನ್ನು ಗಮನಿಸಿದೆ. ಕೈಗಳ ಮೇಲೆ ಅಲ್ಲಲ್ಲಿ ಪರಚಿದ ಗಾಯಗಳೂ ಕಂಡವು. ಅಂಗಳದಲ್ಲಿ ಬೊಗಳುತ್ತಿದ್ದ ನಾಯಿ ನನ್ನನ್ನು ಸುತ್ತುತ್ತಾ ಬೊಗಳಲು ಆರಂಭಿಸಿತು. ನಾನು ನಿಂತ ಜಾಗದಲ್ಲೇ ಕುಸಿದು ಬಿದ್ದೆ! ಅಷ್ಟೇ ನೆನಪು ನನಗೆ! ಇಂದೂ ಆ ಘಟನೆ ನೆನಪಾದರೆ ಬೆವರುತ್ತೇನೆ. ಆ ದಿನ ಟಾಮಿಯೇ ನನ್ನನ್ನು ಕಾಣದ ಆಗೋಚರತೆಯಿಂದ ರಕ್ಷಿಸಿತೇನೋ ತಿಳಿಯದು! ನಾಯಿಗಳು ಆಗೋಚರ ಶಕ್ತಿಯ ಸಂಚಾರ ಗ್ರಹಿಸಬಲ್ಲವಂತೆ.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!