ಸಾಕಿ, ನೀ ಕರೆಯುವ ಮೊದಲು
ನನಗೂ ಹೇಳಲಿಕ್ಕಿದೆ, ನೀ ಬರೀ ಅತಿಥಿಯಷ್ಟೇ..
ಸ್ನೇಹದ ಸಂಭ್ರಮದಲಿ ಮೂಡಿ ಮರೆಯಾದ
ಬಂಧುವಂತೆ ನನಗನ್ನಿಸುತ್ತಿಲ್ಲ ನೀನು,
ಬಿರುಮಳೆಯಾದ ಮೇಲೂ ತಿಳಿ ಮೋಡದ ನಡುವೆ
ಪನ್ನೀರಿನಂತೆ ನಿನ್ನ ನೆನಪು ಹನಿಸುತ್ತಿರುವಾಗ...
ಕ್ರೋದ ಕ್ರೌರ್ಯ ದ ಬದುಕಿನಲ್ಲೂಮ್ಮೆ
ಮತ್ತೆ ಮತ್ತೆ ಬದುಕುವ ಇರಾದೆ ಇಮ್ಮಡಿಸಿದಾಗ
ಇರುಳ ಇರುವಿಕೆಯಲ್ಲೂ ಇಂಚರದಂತೆ ಮಾತುಗಳು
ನಾದಲೋಕದ ಸ್ವಾದವನು ಮರಳಿ ಸೆಳೆಯುತಿದೆ...
ರಕುತದಲೂ ಬಣ್ಣವನು ಬೆರ್ಪಡಿಸೋ ಸಂತೆಯಲಿ
ಹೇಗೆ ಹೇಳಲಿ ಸಾಕಿ, ನನ್ನ ನಿನ್ನ ಅಪರಿಮಿತ ಪ್ರೀತಿಯ
ಹುಚ್ಚರ ಲೋಕದಲಿ ಹುಡುಗಾಟ ಹೇಗೆ ಹೇಳು
ಹುಡುಕುತ್ತಿರುವ ಹಂತಕರು ಹತ್ತಿರವಿರುವಾಗ...
ಮತ ಮತಗಳ ಮೌಲ್ಯವನು ಮೆರೆಯುತ್ತಿರೋ ಮನಸುಗಳಿಗೆ
ಮಾನವೀಯತೆಯ ಮರೆವು ಮುಕ್ತಿಯೇ??
ಜೀವಗಳ ಜೊತೆಯಲ್ಲಿ ಜೂಜಾಟ ನಡೆಸೋ ಜನರಿಂದು
ಗದ್ದುಗೆಯಲ್ಲಿರುವಾಗ ಗಮ್ಯವನು ನೀನೇ ಊಹಿಸಬಹುದಲ್ಲ....
-’ಮೌನರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!