ಗೂಗ್ಲ್ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗುತ್ತಾಳೆ ಅಂಬ ಹಳೆಯ ಜೋಕು ನಿಮಗೆಲ್ಲ ಗೊತ್ತಿರಬೇಕು. ಇದನ್ನೇ ಸ್ವಲ್ಪ ಮುಂದುವರಿಸೋಣ ಎಂದು ಗೂಗ್ಲ್ ತೆರೆದೆ. ಕನ್ನಡ ಲಿಪಿಯಲ್ಲಿ (ಯುನಿಕೋಡ್) ಕೆಲವು ಪದಗಳನ್ನು ಬೆರಳಚ್ಚು ಮಾಡಿ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿದೆ. ಅದರ ಫಲಿತಾಂಶ ಇಲ್ಲಿದೆ-
| ಹುಡುಕಿದ ಪದ | ದೊರಕಿದ ತಾಣ |
| ಪೆದ್ದ | ಶ್ಯಾಮ ಕಶ್ಯಪ ಅವರ [http://shamkashyap.blogspot.com/2005_01_01_shamkashyap_archive.html|ಬ್ಲಾಗ್] |
| ಮೂರ್ಖ | ಕನ್ನಡ ವಿಕಿಪೀಡಿಯಾದಲ್ಲಿರುವ [http://kn.wikipedia.org/wiki/%E0%B2%B5%E0%B2%BF%E0%B2%B5%E0%B3%87%E0%B2%95%E0%B2%BE%E0%B2%A8%E0%B3%A6%E0%B2%A6|ಸ್ವಾಮಿ ವಿವೇಕಾನಂದ ಪುಟ] |
| ಹುಚ್ಚ | ಕನ್ನಡ ಸಾಹಿತ್ಯ ತಾಣದಲ್ಲಿರುವ [http://www.kannadasaahithya.com/uniarc/index.php?layout=main&cslot_1=275|ಕಂಬಾರರ ಜೋಕುಮಾರ ಸ್ವಾಮಿ ನಾಟಕ] |
| ಕಳ್ಳ | ಕನ್ನಡ ಸಾಹಿತ್ಯ ತಾಣದಲ್ಲಿರುವ [http://www.kannadasaahithya.com/uniarc/index.php?layout=main&cslot_1=270|ಕಂಬಾರರ ಕರಿಮಾಯಿ] |
| ಸೋಮಾರಿ | [http://www.google.com/search?hl=kn&q=%E0%B2%B8%E0%B3%8B%E0%B2%AE%E0%B2%BE%E0%B2%B0%E0%B2%BF&btnI=%E0%B2%A8%E0%B2%BE%E0%B2%A8%E0%B3%87+%E0%B2%85%E0%B2%A6%E0%B3%83%E0%B2%B7%E0%B3%8D%E0%B2%9F%E0%B2%B5%E0%B2%82%E0%B2%A4%2F%E0%B2%A4%E0%B3%86|ಹರಿಪ್ರಸಾದ್ ನಾಡಿಗ್]!!!! |
ಅಂದ ಹಾಗೆ ಈ ಫಲಿತಾಂಶಗಳು ಈ ದಿನ (ಅಕ್ಟೋಬರ್ 26ರಂದು). ಹಲವು ದಿನ, ತಿಂಗಳು ಕಳೆದಾಗ ಅವು ಬದಲಾಗುವ ಸಾಧ್ಯತೆಗಳಿವೆ.
ಸಿಗೋಣ,
ಪವನಜ
ಪ್ರತಿಕ್ರಿಯೆ (2)