ಮನೆಯೆಂದರೆ ಮುದವಿರಬೇಕು
ಹಸಿರು ಪೈರ ಬನವಿರಬೇಕು
ಬೆಳಕಿಗೆ ಬಾಗಿಲು ತೆರೆದಿರಬೇಕು
ಕತ್ತಲ ಅಳಿಸುವ ನಗುವಿರಬೇಕು
ಕಿಟಕಿಯ ಅಂಚಲಿ ನೆನಪಿರಬೇಕು
ಎಳೆಯ ಮಕ್ಕಳ ತುಂಟತನವಿರಬೇಕು
ಅಪ್ಪನ ಗದರು ದನಿಯಿರಬೇಕು
ಅಮ್ಮನ ಅಕ್ಕರೆಯ ಓಲೈಕೆಯಿರಬೇಕು
ಮನೆಯಲಿ ನೆಮ್ಮದಿಯ ಮದ್ದಿರಬೇಕು
ಅಟ್ಟಣಿಗೆಯಲಿ ಸುಖನಿದ್ರೆಯಿರಬೇಕು
ಇರುವುದ ಬಳಸಿ ನಾವು ಬಾಳಬೇಕು
ಬರದುದ ಬಿಟ್ಟು ನಾವು ಸಾಗಬೇಕು
-ನಿರಂಜನ ಕೆ ನಾಯಕ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!