ದುಂಡು ಮಲ್ಲಿಗೆ ಒಂದು ಅರಳಿದೆ
ಒಂದು ನಾಳೆಗೆ ಕಾದಿದೆ
ಸರದಿ ಸಾಲಲಿ ಮತ್ತೆ ಎರಡಿದೆ
ಬಿರಿವ ದಿನಗಳು ಮುಂದಿದೆ
ಅರಳಿ ನಗುತಿಹ ದಿನದಿ ಕಂಪನು
ಹರಡಿ ಸಂತಸ ಪಡುತಿದೆ
ನಾಳೆಗುಳಿಯೆನು ಎಂಬ ನೆನಪಲಿ
ಇಂದು ನೋವಲಿ ಮುದುಡದೆ
ಬಿಳಿಯ ಹೂವಿಗೆ ಹಸಿರು ಎಲೆಗಳು
ಚಂದ ವೇದಿಕೆ ನೀಡಿದೆ
ನಾಳೆಗಿಲ್ಲದ ಚಿಂತೆ ಇಲ್ಲದೆ
ಇಂದು ನೋಡಿಕೊ ಎನುತಿದೆ
ಸಣ್ಣ ಆಯುವ ಪಡೆದು ಬಂದೆನು
ಎಂಬ ನೋವನು ಹೊಂದದೆ
ದೇವ ಪೂಜೆಗೆ ಒದಗಿ ತನ್ನಯ
ಬದುಕು ಸಾರ್ಥಕ ಪಡಿಸಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಶ್ರೀಮತಿ ಭಾರತಿ ಕೊಲ್ಲರಮಜಲುರವರ ವಾಲ್ನಿಂದ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!