*ಮಗು* ತಲೆಯ ಮೇಲೆ ಬಿಳಿಯ ಜುಟ್ಟು

           ಮುಖದ ತುಂಬ ಗಡ್ಡ ಬಿಟ್ಟು

           ತಾತನಂತೆ ಕಾಣುತಿರುವ

          ‌ ಚಿತ್ರ ಯಾರದು

 

*ಅಮ್ಮ* ಬೇಡ ಕುಲದೆ ಜನಿಸಿದವರು

           ತಪವ ಗೈದ ಮಹಾತ್ಮರಿವರು

           ಬಹಳ ದೊಡ್ಡ ಋಷಿಗಳವರು

           ನಮಗೆ ಪೂಜ್ಯರು

 

*ಮಗು*   ಎದರಲೇನೊ ಇಟ್ಟುಕೊಂಡು

    ‌ ಬರೆಯುತಿಹರು ನೀನು ನೋಡು

             ನಮ್ಮ ಹಾಗೆ ಪಾಠವನ್ನು

            ಬರೆಯುತಿರುವರೆ?

 

*ಅಮ್ಮ* ವಾಲ್ಮೀಕಿ ಎಂದು ಇವರ ಹೆಸರು

            ರಾಮಾಯಣ ಬರೆದರಿವರು

            ರಾಮಚರಿತೆ ನಮಗೆ ಕೊಟ್ಟು

            ಅಮರರಾದರು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್