ಸುಂದರ ಉಡುಪಲಿ ಹೊರಟುದು ಎಲ್ಲಿಗೆ
ಮೊದಲಿಗೆ ನುಡಿಯೆಯ ನೀನಾರು
ಉರಿಯುವ ಹಣತೆಯ ಹಣ್ಣೆಂದೆಣಿಸುತ
ಬೆಂಕಿಯ ಉರಿಯಲಿ ಬೀಳದಿರು
ತನುವಿಗೆ ಈತರ ಹಸಿರಿನ ಬಣ್ಣವ
ಚಂದದಿ ಯಾರದು ಹಚ್ಚಿದರು
ಹಸಿರಿನ ಮೇಲೆಯೆ ಬೆಳ್ಳನೆ ಗೆರೆಯನು
ಹೇಗದು ನೆಟ್ಟಗೆ ಎಳೆದಿಹರು
ನಿನ್ನನು ನೋಡಿದ ಚಿಣ್ಣರು ಹರ್ಷದೆ
ಕರೆದರು ನನ್ನನು ನೋಡೆಂದು
ಕೀಟವೊ,ಚಿಟ್ಟೆಯೊ ಏನೇ ಆಗಿರು
ಸೊಗಸಿಗೆ ಸೋತೆನು ನಾನಿಂದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!