ಬೋನಿನ ಒಳಗಡೆ ಇರಿಸಿದ ತಿನಿಸನು
ದಾನವಿದೆನ್ನುತ ಬಯಸದಿರು
ಪ್ರಾಣವ ತೆಗೆಯುವ ರೂಪಿತ ಸಂಚಿದು
ಬೇನೆಯ ಸುಳಿಯಲಿ ಸಿಲುಕದಿರು
ಬಲೆಯಲಿ ಸಿಲುಕಿಸಿ ಹಣಿಯುವ ತಂತ್ರವು
ಒಳಗಡೆ ಇರಿಸಿದ ಸಿಹಿತಿಂಡಿ
ಹಲವಿಧ ಹಾದಿಯ ಹಿಡಿವರು ಜಯಿಸಲು
ಕಲೆಯಲಿ ಜಾಣರು ಈ ಮಂದಿ
ಜಾಲವನರಿಯುತ ಎಚ್ಚರದಿಂದಿರು
ಕೋಲನು ಮರೆಯಲಿ ಇರಿಸಿಹರು
ಕಾಲವು ಬದಲಿದೆ ಅವರಿಗೆ ಅರಿಯಲಿ
ಸೋಲಿನ ರುಚಿಯನು ನೀ ತೋರು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ : ಅಂತರ್ಜಾಲ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!