ಕನಸಿನ ಅರಮನೆಯಂಥ ಸೌಧ ಕಟ್ಟಬೇಕು

ಮುತ್ತಿನಂಥ ಮನೆ ಮನ ಆಗಿರಬೇಕು

ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು

ಹಸಿದು ಬಂದವರಿಗೆ ಅನ್ನ ನೀಡ ಬೇಕು

ದಣಿದು ಬಂದೋರಿಗೆ ನೀರು ಕೊಡಬೇಕು

 

ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು 

ಮಕ್ಕಳನ್ನು ಮುದ್ದಿನಿಂದ ಸಾಕಬೇಕು 

ಪ್ರಾಣಿಗಳಿಗೆ ಸ್ನೇಹ ಪ್ರೀತಿ ಹಂಚಬೇಕು 

ಹಕ್ಕಿಗಳ ಕಲರವವ ನಿತ್ಯ ಆಲಿಸಬೇಕು 

 

ಸುತ್ತಲೂ ಚಂದದ ಗಿಡಗಳು ಇರಬೇಕು

ಹೂಗಳ ಸುಗಂಧ ಎಲ್ಲೆಡೆ ಹರಡಬೇಕು

ಹೂದೋಟದಿ  ಬಣ್ಣದ ಚಿಟ್ಟೆಗಳು ಹಾರುತ್ತಿರಬೇಕು

ಚಿಟ್ಟೆಗಳ ನೋಡುತ ಮನ ಪುಳಕಗೊಳ್ಳಬೇಕು

-ಸುಭಾಷಿಣಿ ಚಂದ್ರ, ಕಾಸರಗೊಡು,

ಚಿತ್ರ ಕೃಪೆ: ಇಂಟರ್ನೆಟ್ ತಾಣ