ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ. ಕುದಿಯುವ ಈ ಹಾಲು, ನೀರಿನ ಮಿಶ್ರಣವನ್ನು ಹುರಿದ ಗೋದಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಮಗುಚಿ. ಏಲಕ್ಕಿ ಪುಡಿ ಸೇರಿಸಿ ಮತ್ತೆ ಗಂಟಿಲ್ಲದಂತೆ ಮಗುಚಿ ಇಳಿಸಿ. ಇದು ಬೇಗನೇ ಆಗುವ ಸಿಹಿತಿಂಡಿ.

- ಸಹನಾ ಕಾಂತಬೈಲು, ಮಡಿಕೇರಿ