ಜಪಾನಿನ ಪಾಯಿಖಾನೆಗಳು ಇಡಿ ಜಗತ್ತಿನಲ್ಲೆ ತಾಂತ್ರಿಕವಾಗಿ ಅತ್ಯಂತ ಉನ್ನತಮಟ್ಟದವು ಎಂಬುದು ನಿಮಗೆ ಗೊತ್ತೆ?
ಜಪಾನಿನವರು ತಂತ್ರಜ್ಞಾನದಲ್ಲಿ ಬಹಳ ಮುಂದಿರೋದ್ರಿಂದ ಇದೇನೂ ಸೋಜಿಗದ ವಿಚಾರವಲ್ಲ ಎಂದು ನೀವು ಹೇಳಬಹುದು. ಆದರೆ ಇವರ ಪಾಯಿಖಾನೆಯ ತಂತ್ರಜ್ಞಾನ ವಿಶೇಷತೆಯ ಬಗ್ಗೆ ಕೇಳಿದ್ದೀರೇನು?
ಓದಿ:

ವಾಶ್ಲೆಟ್ ಎಂದು ಕರೆಯಲಾಗುವ ಇವುಗಳು ನೀಡುವ ಸವಲತ್ತುಗಳಲ್ಲಿ , ತಾಂತ್ರಿಕತೆಯಲ್ಲಿ ಅತ್ಯಂತ ಉನ್ನತಮಟ್ಟದವಂತೆ. ಈ ಕಮೋಡುಗಳು ಅತ್ಯಂತ sophisticated ಪಾಯಿಖಾನೆಗಳೆಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಕೂಡ ಸೇರಿವೆಯಂತೆ! ಇವನ್ನು ಜನಪ್ರಿಯವಾಗಿ "ಜಪಾನೀಸ್ ಹೈ ಟೆಕ್ ಟಾಯ್ಲೆಟ್ಟುಗಳೆಂದೇ ಕರೆಯಲಾಗುತ್ತವೆಯಂತೆ. ಏನು ಈ ಪಾಯಿಖಾನೆಗಳ ಇಷ್ಟೊಂದು ಅಂತಹ ವಿಶೇಷತೆ? - ಈ ವಾಶ್ಲೆಟ್ಟುಗಳಲ್ಲಿ ಕುಳಿತವರಿಗೆ ಬೆಚ್ಚಗೆ ಮಾಡುವ ಸವಲತ್ತು, ಮಸಾಜು, ಹಾಗೂ ತೊಳೆದುಕೊಳ್ಳೋದಕ್ಕೆ ಬೆಚ್ಚಗಿನ ನೀರಿನ ಪ್ರವಾಹ (jet
) ಮತ್ತು ಆಟೊಮ್ಯಾಟಿಕ್ಕಾಗಿ ತೆರೆದುಕೊಳ್ಳುವ ಕಮೋಡು ಬಾಗಿಲು, ಆಟೊಮ್ಯಾಟಿಕ್ಕಾಗಿ ಫ್ಲಶ್ ಆಗೋದು, ಇವಲ್ಲದೇ ಇದನ್ನು ಚಾಲನೆಗೊಳಿಸೋದಕ್ಕೆ ರಿಮೋಟು ಕಂಟ್ರೋಲು ಕೂಡ ಇವೆಯಂತೆ 

ಅಷ್ಟೇ ಅಲ್ಲ, ಹಲವು ಇಂತಹ ವಾಶ್ಲೆಟ್ಟುಗಳ ಮಾಡೆಲ್ ಗಳು ಸಂಪೂರ್ಣ ರೂಮಿಗೆ ಏರ್ ಕಂಡೀಶನ್ ವ್ಯವಸ್ಥೆಯೊಂದಿಗೂ ಬರುತ್ತದಂತೆ!
ಎಲ್ಲದಕ್ಕಿಂತಲೂ ಮಜವಾದ ಈ ಕೆಳಗಿನ ಪೋಸ್ಟರ್ ನೋಡಿ. ಇದು ಇಂತಹ ಒಂದು ವಾಶ್ಲೆಟ್ (ಆಕಾ ಹೈ ಟೆಕ್ ಕಮೋಡು)ಗೆ ಜಪಾನಿನಲ್ಲಿ ಮೂಡಿ ಬಂದ ಜಾಹಿರಾತು 

(ಇಂಗ್ಲಿಷ್ ವಿಕಿಪೀಡಿಯದಲ್ಲಿ ಇದು 'ನಿಮಗಿದು ಗೊತ್ತೆ?' ಕಾಲಂನಲ್ಲಿ ಮೂಡಿಬಂದಿತ್ತು. ಅದರ crude ತರ್ಜುಮೆ, ಈ ಲೇಖನ. ಚಿತ್ರಗಳ ಕೃಪೆ ವಿಕಿಪೀಡಿಯದ್ದು)
ಮತ್ತಷ್ಟು ಮಾಹಿತಿ: ಜಪಾನೀಸ್ ಪಾಯಿಖಾನೆಯ ಬಗ್ಗೆ ವಿಕಿಪೀಡಿಯ ಲೇಖನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!