ಖ್ಯಾತ ಕವಿ ಚೆನ್ನವೀರ ಕಣವಿಯವರ ಸಾಲುಗಳಿವು. 'ಕನ್ನಡ' ಪದವೇ ರೋಮಾಂಚನ.ಕನ್ನಡಿಗರ ಮೈ ಮನಗಳಲಿ ಹರಿಯುವ ರಕ್ತದ ಕಣಕಣವೂ ಕನ್ನಡ. ನಮ್ಮ ತಾಯಿ ಭಾಷೆ ಕನ್ನಡ. 'ಕನ್ನಡವ ಮರೆತರೆ ಹೊತ್ತು ಹೆತ್ತ ತಾಯಿಯನ್ನೇ ಮರೆತಂತೆ ಅಲ್ಲವೇ? ಹಿರಿಯ ಸಾಹಿತಿಗಳ, ಕನ್ನಡಾಭಿಮಾನಿಗಳ ಸಂಘಶಕ್ತಿ, ಹೋರಾಟದ ಫಲವೇ 'ಕರ್ನಾಟಕ' ನಾಮಕರಣ.

ಬಿ.ಎಂ.ಶ್ರೀಯವರ ಕವನದ ಸಾಲುಗಳನ್ನು ನೋಡೋಣ.

ಏರಿಸಿ ಹಾರಿಸಿ ಕನ್ನಡದ ಬಾವುಟ

ಬಾಳ್ ಕನ್ನಡ ತಾಯ್

ಏಳ್ ಕನ್ನಡ ತಾಯ್

ಆಳ್ ಕನ್ನಡ ತಾಯ್

ಕನ್ನಡಿಗರೊಡತಿ ಓ ರಾಜೇಶ್ವರಿ

ಕನ್ನಡ ನಾಡಲ್ಲಿ ಕನ್ನಡವೇ ನಾಡಭಾಷೆ.

 

ಕನ್ನಡ ನುಡಿ ನಮ್ಮ ಹೆಣ್ಣು

ನಮ್ಮ ತೋಟದಿನಿಯ ಹಣ್ಣು

ಪಡುವ ಕಡಲ ಹೊನ್ನ ಹೆಣ್ಣು

ನನ್ನ ಜೀವದುಸಿರು ಕಣ್ಣು

ಡಾ.ದ.ರಾ.ಬೇಂದ್ರೆಯವರು 'ಕರ್ನಾಟಕವೊಂದೇ' ಎಂಬುದಾಗಿ ಕೂಗಿ ಕೂಗಿ ಸಾರಿದರು.

 

ಒಂದೇ ಒಂದೇ ಕರ್ನಾಟಕ ಒಂದೇ

ಇಂದೇ ಮುಂದೇ ಎಂದೇ ಕರ್ನಾಟಕ ಒಂದೇ

ಜಗದೇಳಿಗೆ ಯಾಗುವುದಿದೆ ಕರ್ನಾಟಕದಿಂದೇ

ಆಚಾರ-ವಿಚಾರ-ವ್ಯವಹಾರದಲ್ಲಿರಲಿ ಕನ್ನಡಕ್ಕೆ ಆದ್ಯತೆ. ಕಲಿಸೋಣ-ಕಲಿಯೋಣ, ಮಾತನಾಡೋಣ ಕನ್ನಡ. ಕನ್ನಡಮ್ಮನ ಮಡಿಲು ಸಂತಸದ ಒಡಲು ತಿಳಿಯೋಣ.

ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಎಲ್ಲ ಮಹನೀಯರು, ಮಹಿಳೆಯರು, ಸಾಹಿತಿವರೇಣ್ಯರನ್ನು ನೆನೆಯುತ್ತಾ

ಸಂತಸ ಸಂಭ್ರಮದಿಂದ ಒಗ್ಗೂಡಿ, ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸೋಣ, ನೆಲಜಲದ ಮಹತ್ವ ಅರಿಯೋಣ-ತಿಳಿಯೋಣ-ತಿಳಿಸೋಣ.

ಸಿರಿಗನ್ನಡಂ ಬಾಳ್ಗೆ

ಸಿರಿಗನ್ನಡಂ ಏಳ್ಗೆ

ಕನ್ನಡಮ್ಮನಿಗೆ ಜೈ

-ರತ್ನಾ ಕೆ ಭಟ್ ತಲಂಜೇರಿ

(ಆಕರ:ಹಿರಿಯ ಸಾಹಿತಿಗಳ ನುಡಿಮುತ್ತು ಕೃತಿ)