ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು.

___LINK_OPEN_href="http://bp0.blogger.com/_Ae1oXntaLQM/R6ip6NWCIGI/AAAAAAAAADY/u_vlbHfpUs0/s1600-h/purandara.jpg"___


ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ.


ಆದರೆ ಸ್ವಲ್ಪ ದಿನಗಳ ಹಿಂದೆ, ಷಡಕ್ಷರಿ ಮಂತ್ರವನ್ನು ಉಪಯೋಗಿಸಿದಾಗ :) ಈ ಕ್ಷೇಮಪುರ ಗೇರುಸೊಪ್ಪೆ ಎಂದು ತಿಳಿದುಬಂತು. ಜೈ ಗೂಗಲ್! GOOGLE - ಷಡಕ್ಷರಿ ಮಂತ್ರ ಯಾವುದೆಂದು ತಿಳಿಯಿತಲ್ಲ ;) ?


ಪುರಂದರ ದಾಸರು ಗೇರುಸೊಪ್ಪೆಯವರಿರಬೇಕೆಂಬುದು ನಂಬಬಲ್ಲ ಮಾತೇ. ಅದು ಆ ಕಾಲದಲ್ಲಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತಂತೆ. ಪರದೇಶಗಳಿಗೆ ಸಂಬಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಗೇರುಸೊಪ್ಪೆಯವರಲ್ಲಿ ಹಣವಿದ್ದುದ್ದೂ, ಅದಕ್ಕೆ ತಕ್ಕಂತೆ ಅಲ್ಲಿ ರತ್ನಪಡಿ ವ್ಯಾಪಾರಿಗಳಿದ್ದಿರಬಹುದಾದ್ದೂ ಒಂದಕ್ಕೊಂದು ತಾಳೆಯಾಗುತ್ತೆ. ಈ ವಿಷಯಕ್ಕೆ ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ನೋಡಿ.


ಪುರಂದರ ದಾಸರ ಆರಾಧನೆಯಂದು, ಅವರಿಗೊಂದು ನುಡಿನಮನ ಈ ಕೆಳಗಿನ ಕೊಂಡಿಯಲ್ಲಿದೆ. ಇದು ಕೆಲವು ವರ್ಷಗಳ ಹಿಂದೆ ಸಾಹಿತ್ಯಾಸಕ್ತ ಗುಂಪೊಂದರ ಮುಂದೆ, ದಾಸ ಸಾಹಿತ್ಯದ ಸಾಹಿತ್ಯ-ಸಂಗೀತ ಎರಡನ್ನೂ ಒಗ್ಗೂಡಿಸಿಕೊಂಡು ನಾನು ಮಾಡಿದ ಒಂದು ಭಾಷಣದ ಧ್ವನಿಮುದ್ರಿಕೆ. ಆಸಕ್ತರು ಕೇಳಬಹುದು


___LINK_OPEN_href="http://hamsanandi.mypodcast.com/" target="_blank" title="ದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ"___ದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

http://hamsanandi.mypodcast.com/

ದಾಸಶ್ರೇಷ್ಠರನ್ನು ನೆನೆಯುವ ಇನ್ನೊಂದು ಬರಹವನ್ನು ನೀವು ___LINK_OPEN_href="http://neelanjana.wordpress.com/2008/02/05/" target="_blank" title="ದಾಸರೆಂದರೆ ಪುರಂದರ ದಾಸರಯ್ಯ!"___ಇಲ್ಲಿ ಓದಬಹುದು.


-ಹಂಸಾನಂದಿ