ಸಿನಿಮಾ: ಮುದುಡಿದ ತಾವರೆ ಅರಳಿತು
ಹಾಡಿರುವವರು : ಎಸ್ .ಪಿ.ಬಿ
ಇನಿ/ಸಂಗೀತ : ?
ಬರೆದಿರುವವರು: ಚಿ.ಉದಯಶಂಕರ್ (?) ಇರಬಹುದು
ಮುಂಜಾನೆ ಮೂಡಿದ ಹಾಗೆ
ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ
ಕೆಂದಾವರೆ ನೀನು ನನಗೆ. ಆ. ಹಾ.. ಆಅ....|| ಪಲ್ಲವಿ||
ಹಸಿರಾದ ಪ್ರೀತಿಯ ಕಂಡು
ಉಸಿರಾಗ ಬಂದೆನು ನಾನು |೨|
ಸವಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ
ಹೊಸದಾದ ಆಸೆಯ ತೋರಿ
ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ
___LINK_OPEN_href="http://www.musicindiaonline.com/music/kannada/s/movie_name.2682/" title="ಮುದುಡಿದ ತಾವರೆ ಅರಳಿತು"___ಇಲ್ಲಿಂದ ಹಾಡನ್ನು ಕೇಳಿ ನಲಿವನ್ನು ಪಡೆಯಿರಿ :)
ಪ್ರತಿಕ್ರಿಯೆ (1)