ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ.
ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.
ಯೋಚನೆ ಮಾಡಿ ನೋಡಿದಾಗ ಎರಡೂ ಸರಿ ಇರಬಹುದು ಅಂತ ಅನ್ನಿಸುತ್ತದೆ.
ಯಥೇಚ್ಛ - ಯಥಾ ಇಚ್ಛಾ : ಇಚ್ಛೆಯಿದ್ದಷ್ಟು ಅರ್ಥಾತ್ ಬೇಕಾದಷ್ಟು
ಯಥೇಷ್ಟ- ಯಥಾ ಇಷ್ಟ : ಇಷ್ಟವಿದ್ದಷ್ಟು ಅರ್ಥಾತ್ ಬೇಕಾದಷ್ಟು
ಅಲ್ಲವೇ?
ಪ್ರತಿಕ್ರಿಯೆ (1)