ಕೊಟ್ಟ ಪುಸ್ತಕದಲ್ಲಿ ಕೇವಲ ಅವಳದೇ ನೆನಪುಗಳು.
ಅದು ಅಕ್ಷರ ರೂಪದಲ್ಲಿ ಅರಳಿದ ಒಂದು ಸುಂದರ ಪ್ರೇಮ ಕಾವ್ಯ.
ಸೆಳೆದ ಪ್ರೀತಿಗೆ ಪ್ರೇಮದ ಆಲಾಪ...

ಆದರೆ...

ಅವಳ ನೆನಪು... ಅವಳ ಚಂದ... ಅವಳ ನೋಟ..
ಅವಳ ನಗೆ... ಅವಳ ಒಂದೇ ಒಂದು ಚುಂಬನ..
ಈ ಪುಸ್ತಕದ ಹಲವು ಚಂದಗಳು.

ಆದರೆ...

ದಿನವೂ ಅವಳ ಸ್ಪರ್ಶಕ್ಕೆ ಮುದಗೊಳ್ಳುತ್ತಿದ್ದ ಪುಟಗಳು
ಹೊಸದೊಂದು ಕವಿತೆ ಹೇಳುತ್ತಿದ್ದವು.

ಆದರೆ...

ಈಗ ಅವಳಿದ್ದಾಳೇ. ಅವಳ ನೆನಪುಗಳಿವೆ. ಬಾಡುತ್ತಿರುವ
ಅವಳ ಪ್ರೀತಿಯಿದೆ, ಸೆಳೆತ ಇದೆ, ಸೌಂದರ್ಯವಿದೆ.

ಆದರೆ,

ಮೊದಲು ಬರೆದುಕೊಟ್ಟ ಆ ಪುಸ್ತಕವಿಲ್ಲ.

-ರೇವನ್...