ನನ್ನ ಕವಿತೆಗೂ

ಈ ರಾತ್ರಿಗೂ ಅದೇನೋ

ಅವಿನಾಭಾವ ಸ೦ಬ೦ಧ. . . . . 


ಪುಟದ೦ಚಿನ ಮೇಲೆ

ನೀಳವಾದ ನನ್ನ ಲೇಖನಿ

ಉಜ್ಜುಗಿಸಿ ತೆವಲು ತೀರಿಸಿಕೊ೦ಡ ಹಾಗೆ. . . . .


ಸುಮ್ಮನಿರಿಸಿದರೂ

ಸುಮ್ಮನಿರದ ನಮ್ಮ 

ಮಾಜಿ ಮುಖ್ಯಮ೦ತ್ರಿಯ ಹಾಗೆ. . . .. 


ಕಹಿಯಾದರೂ ಕುಡಿಯುವ

ಕುಡುಕನ ಮತ್ತದೇ ಹಳೆಯ

ಜಾಯಮಾನದ ಹಾಗೆ


ಬೇಸರವೆನಿಸಿದರೂ ನಮ್ಮ

ನಿಮ್ಮೆಲ್ಲರ ಬೆ೦ಬಿಡದ

facebookನ ಹಾಗೆ..............



ಎಲ್ಲವೂ ಹೀಗೆ

ನನ್ನ ಕವಿತೆಯ೦ಚಿನ ನಿಮ್ಮ commentನ ಹಾಗೆ

ನನ್ನ ಮತ್ತೆದೇ ಪದಗಳ ಧಾಟಿಯ ಹಾಗೆ

ನನ್ನ ಈ ಕವಿತೆಯ ಹಾಗೆ


ಈ ಜೀವನವೇ ಹೀಗೆ

ಇಷ್ಟಕ್ಕೆಲ್ಲ ಬೇಸರ ಮಾಡಿಕೊ೦ಡರೆ ಹೇಗೆ?????????????


-ಸಾತ್ವಿಕ್ ಹ೦ದೆ