ತೆರೆಯಾಗಿಬಿಡು ಈ ಜೀವನದ ಸಾಗರದಿ.
ಕರಗಿಸಿಬಿಡು ಎಲ್ಲವ ಅದರಲಿ,
ಏಳು ಬೀಳುಗಳು ಸಹಜವೇ ಆದರೂ,
ತಾಳು ನೀ, ತೇಲಿ ತೇಲುತ್ತ ......
ಮುಳುಗದಿರಲಿ, ಬದುಕ ಈ ಲೀಲೆಯು ...........
ಬದುಕಿದು ಒರಟು ಕೆಲಸ,,, ಸರಿಯಾಗಲಿಲ್ಲವೆಂದು ಮತ್ತೆ ಮತ್ತೆ ಕಟ್ಟ ಬಲ್ಲದ್ದಂತೂ ಅಲ್ಲ..........ಸಾಧ್ಯವೇ??
ಇಂತಹ ನೂರಾರು ಪ್ರಶ್ನಾರ್ಥಕ ಭಾವನೆ ಬರುಬರುತ್ತಾ ಅದರ ಸ್ಥಾನ ವನ್ನು ಮನದಾಳದಲ್ಲಿ ಆಕ್ರಮಿಸಿಬಿಟ್ಟಿದೆ...
ಯಾಕೆ ಹೀಗೆ? ಯೋಚನೆಗಳು ಮನುಷ್ಯನನ್ನು ತುಂಬಾ ಎತ್ತರಕ್ಕೆ ಕರೆದೊಯ್ಯುತ್ತದಂತೆ...!
ಅಕ್ಷರಸಃ ದಿಟ..! ಅಂತೆಯೇ ಜೊತೆಗಿರುವವರನ್ನು ಸಹ,
ಅವರ ಯೋಚನೆಗಳು, ನಿರ್ಧಾರಗಳು ತುಂಬಾ ಆಳಕ್ಕೆ ಇಳಿಸುತ್ತವೆ ಅನ್ನೋದು ಅಷ್ಟೇ ನಿಜ...
ಇದು ಸರಿಯೇ,,,,,,,,,,, ನಾವ್ಯಾಕೆ ಹೀಗೆ??? ಎಂಬ ಪ್ರಶ್ನೆಗೆ ಪ್ರಶ್ನೆಯೇ ಉತ್ತರ........ಇದುವರೆಗೂ ಉತ್ತರ ದೊರಕಿಲ್ಲ..
...ಅಥವಾ ನಮ್ಮ ವ್ಯಕ್ತಿತ್ವವೇ ಹಾಗೋ ತಿಳಿದಿಲ್ಲ....
ಎಲ್ಲವು, ಎಲ್ಲರು ಬೇಕೆಂಬ ಹಪಹಪಿಕೆ.....ಅಭ್ಯಾಸ ಅಪಕ್ವವೇ??
ಇನ್ನು ಹುಡುಕುತನವಾ??....ಉಹುಂ ....ಬದುಕನ್ನು ಅರ್ಥೈಸುವ , ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ , ವಿವೇಚನಾ ಶಕ್ತಿ
ಇದೆ ಅಂತಾದರೆ ಇನ್ನೆಲ್ಲಿ ಆ ಹುಡುಕುತನಕ್ಕೆ ಜಾಗ ?
ಸ್ನೇಹಿತರೂ ಅಥವಾ ಆಪ್ತರು ಎಂದು ಕೊಂಡವರಲ್ಲಿ ಮನ:ಶ್ಯಾಂತಿಯನ್ನ ಆ ಕ್ಷಣಕ್ಕೆ ಪಡೆದಿರುತ್ತೇವೆಯಾದರೂ , ಅದು ನಮ್ಮಲ್ಲಿನ ತುಮುಲಕ್ಕೆ , ನರಳಾಟಕ್ಕೆ ಮತ್ತೊಂದು ಬಗೆಯಿಂದ ನಾಂದಿ ಹಾಡಿರುತ್ತದೆ,,,,,,,,,,,,,,,,,,,
ಜೀವನದಲ್ಲಿ ಯಾರು ಯಾರಿಗೂ ಶಾಶ್ವತವಲ್ಲ .......ಇಂದು ಬಂದು ನಾಳೆ ಹೋಗುವವರು ಎಷ್ಟೋ ಮಂದಿ ....
ಆದರೆ ಯಾವಾಗಲೂ ಇರಬೇಕು ಎಂಬ ಮನಸಿನಾಳದ ಮಾತಿಗೆನೆನ್ನುವಿರಿ??.....
ಇದ್ದಷ್ಟು ದಿನದ ಮಾತು .. ವ್ಯವಹಾರ, ಕೊಟ್ಟು ಪಡೆದುಕೊಂಡ
ಸಂತಸ, ಹಂಚಿಕೊಂಡ ದುಃಖ , ಸಣ್ಣ ಪುಟ್ಟ ಜಗಳ, ... ಆತಂಕ.....ಎಲ್ಲವು ಬರಿಯ ಹೆಸರಿಗಾ,,,,?
ಇದಕ್ಕೆಲ್ಲಾ ಏನರ್ಥ?? ಇರಲಿ!! ...ಹಪಹಪಿಕೆ ನಮಗಿದ್ದರಾಯಿತಾ??? ಪರಸ್ಪರ ಸ್ನೇಹಿತರಿಬ್ಬರಿಗೂ , ಸಂಬಂಧಿಗಳಲ್ಲಿ ಬೇಕು ತಾನೇ????ಉಳಿಸಿಕೊಳ್ಳುವ ಮನಸ್ಸಿರಬೇಕು.....
ಇಲ್ಲದಿದ್ದರೆ ಈ ತರಹ ಸಹಜವೇ.....
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನೆನಪಿರಲಿ
ಚುಟುಕು...
ಹೀಗಿರಬೇಕಿತ್ತು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)