ದಿನವಿಲ್ಲ, ಕ್ಷಣವಿಲ್ಲ,
ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,
ನಮಗೇಕೆ ಶಕುನವು?
ದಿನವೂ ಪ್ರೀತಿಯ ಸುಗ್ಗಿ,
ಹಿಗ್ಗಿ ಆಚರಿಸುವ, ಪ್ರಿಯೆ,
ನಮಗೇಕೆ ಮಾಸವು?
ನಿನ್ನ ನಾ ನೆನೆಯೋಲ್ಲ
ಏಕೆಂದರೆ ಮರೆಯೋಲ್ಲ, ಪ್ರಿಯೆ,
ನಮಗೇಕೆ ನೆನಪಿನಾಚಾರಣೆಯು?
ಒಂದು ದಿನದ ಆರಾಧನೆ,
ನಮದಲ್ಲವೆ, ಪ್ರಿಯೆ,
ನಮಗೇಕೆ ಆ ಒಂದು ದಿನವು?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!