ನಿನ್ನ ಬಣ್ಣಿಸುವಾಗ
ವಿಸ್ಕಿ ಎದುರಿರುವಾಗ,
ಪದಗಳಿಗೇನೇ ಕೊರತೆ???
ನಿನಗಾಗೇ ಮೂಡಿದೆ
ಈ ನನ್ನ ಕವಿತೆ..

ಉರುಳುವ ಬಾಟಲಿಗಳಿ೦ದ
ಒ೦ದಷ್ಟು ಹೊರಹರಿವು
ಒ೦ದಿಷ್ಟು ಒಳ ಅರಿವು

softwareuuu ಹುಡುಗನ
onsiteuu ಪ್ರೀತಿಯ
ಅರಸಿ ಹೋದವಳು ನೀನು
ಹೋದರೆ ಹೋಗೇ..
ನನಗಾದ ನಷ್ಟವೇನು????
ಅವನದ್ದು ಸಾಫ್ಟಾದ ಜೇನು
ಅ೦ತೂ ಬಲೆಗೆ ಬಿದ್ದವನು
ನಿನ್ನ ಹೊಸಾ ಮೀನು...

ಭಾವನೆಗಳು
ಹಳೆಯ ಬೀರಿನ೦ತೆ.
ಕುಲುಕಿದಷ್ಟೂ ನೊರೆಗಟ್ಟಿ
ಚಿಮ್ಮುವುದು...
ಈ ಉತ್ಪ್ರೇಕ್ಷೆಯ ಅಲೆ
ನನ್ನದೇ ಇರಬಹುದು

ಇದರಿ೦ದ
ನಿನ್ನ ಮನಸಿಗಿಷ್ಟು
ಘಾಸಿಯಾಗಿದ್ದರೆ...
ಆದದ್ದು ಒಳಿತೆ

ಆದರೂ ನಾ ನಿನ್ನ
ಹೆಸರ ಅವಿತೆ
ಇನ್ನೂ ನೀನೇ ಕಣೆ
ಈ poli kaviya
possible ಕವಿತೆ.......!!

-sathwik hande