ಕೊಳಕು ಮನದ ಮನುಜ ಸತ್ತರೂ ಬಿಡಲಾರ

ಥಳುಕು ಹಾಕುತ ಗುಳ್ಳೆನರಿ ಇದ್ದರೂ ಬಿಡಲಾರ


ಗೋಸುಂಬೆ ಬಣ್ಣ ಹೊದ್ದು ಮತ್ಸರದಿ ಮೆರೆಯುತಿಹೆ

ಕಾಸಿಗೆ ಗತಿಯಿಲ್ಲದೇ ದರಿದ್ರದಿ ಅತ್ತರೂ ಬಿಡಲಾರ


ಮಾನವ ಜನ್ಮ ದೊಡ್ಡದು ಅರಿಯದ ಮೂರ್ಖನು

ದಾನವ ಗುಣವ ಲೇಪಿಸುತ ಬಿದ್ದರೂ ಬಿಡಲಾರ


ಸಂಕುಚಿತ ಮನದ ಖಾಲಿ ಕೊಡವಾತ ಧರೆಯಲಿ

ವಂಚಿಸದೆ ಸಾಗುವ ಕಾಯಕ ಆದರೂ ಬಿಡಲಾರ


ದುರ್ಗುಣಗಳ ಮಾಲೆ ಹೊದ್ದು ಮಲಗುವ ನರನಾತ

ಸುಗುಣ ಶೀಲಾ ರತ್ನ ಹೀಗೆಯೇ ಒದ್ದರೂ ಬಿಡಲಾರ


-ರತ್ನಾ ಕೆ ಭಟ್ಟ, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ