ದೇಶದೆಲ್ಲೆಡೆ ಮನೆ ಮಾತಾಗಿರೋ ಟಾಕ್ಸಿಕ್ ನ ಬಗ್ಗೆ ನನ್ನದೊಂದು ಮೂರಾಣೆಯ ಅಭಿಪ್ರಾಯ.

ನನಗನ್ನಿಸಿದ್ದು ಏನಂದ್ರೆ, ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಅಂದ್ರೆ ಈ ತರಹದ ವಿಭಿನ್ನ ಪ್ರಯತ್ನ ತುಂಬಾ ಅವಶ್ಯಕ.Toxic ಅನ್ನೋದು ನೇರವಾದ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಅದರೊಳಗೆ ಇನ್ನೂ ಗಾಢವಾದ Dark Psychology ಅಡಗಿದೆ ಅಂತನ್ಸತ್ತೆ..

ನಿರ್ದೇಶಕರು ಅದನ್ನು ನೇರಾನೇರ ರೀತಿಯಲ್ಲಿ ಹೇಳದೆ, ವಿಭಿನ್ನ ಶೈಲಿಯ ಮೂಲಕ ಕಟ್ಟಿಕೊಡೋಕೆ ಪ್ರಯತ್ನಿಸಿದ್ದಾರೆ.ಆದ್ರೆ ನನಗೆ ಅನಿಸಿದ್ದು, ನಮ್ಮ ಪ್ರೇಕ್ಷಕರಿಗೆ ನಿರ್ದೇಶಕರು ನಿಜವಾಗಿಯೂ ಏನು ಹೇಳೋಕೆ ಹೊರಟಿದ್ದಾರೆ ಅನ್ನೋದು ಅಷ್ಟು ಸರಿಯಾಗಿ ತಲುಪಿಲ್ಲ. ಅದಕ್ಕೆ ಒಂದು ಕಾರಣ, ಯಶ್ ಅಂದ್ರೆ ಸಹಜವಾಗಿಯೇ ಜನರಿಗೆ KGF ನೆನಪಾಗುತ್ತೆ. ಹಾಗಾಗಿ ಬಹಳಷ್ಟು ಜನರು ಅದೇ ರೀತಿಯ ಮಾಸ್ ಎಲಿವೇಶನ್, ಗ್ಯಾಂಗ್‌ಸ್ಟರ್ ಕಥೆ ಮತ್ತು ನೇರವಾದ ನಿರೂಪಣೆಯನ್ನು ನಿರೀಕ್ಷೆ ಮಾಡಿಕೊಂಡು ಸಿನಿಮಾ ನೋಡಿರಬಹುದು.ಆದ್ರೆ Toxic ಅದಕ್ಕಿಂತ ಸಂಪೂರ್ಣವಾಗಿ ಬೇರೆ ಪ್ರಯತ್ನ. ಇದು ಬರೀ “ಯಶ್ ಅವರ ಮತ್ತೊಂದು ಗ್ಯಾಂಗ್‌ಸ್ಟರ್ ಸಿನಿಮಾ” ಅಂತ ನೋಡಿದ್ರೆ ಬಹುಶಃ ಅರ್ಥವಾಗೋದು ಕಷ್ಟ. ಅದರ ಹಿಂದೆ ಇರುವ ಮನೋವೈಜ್ಞಾನಿಕ ಅಂಶ, ಸಂಕೇತಗಳು ಮತ್ತು ನಿರ್ದೇಶಕರು ಹೇಳಲು ಹೊರಟಿರುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದ್ರೆ ಸಿನಿಮಾ ಇನ್ನೊಂದು ರೀತಿಯಲ್ಲಿ ತೆರೆದುಕೊಳ್ಳುತ್ತೆ. ನನಗೆ ವೈಯಕ್ತಿಕವಾಗಿ ಈ ರೀತಿಯ “ಪ್ರಯತ್ನ” ಇಷ್ಟ ಆಯ್ತು. ಎಲ್ಲರಿಗೂ ಇಷ್ಟವಾಗಬೇಕೆಂಬ pleasing approach ಗಿಂತ, ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾಗಳಿಗೆ ಹೊಸ ರೀತಿಯ ಗುರುತು ಸಿಗಬೇಕಾದರೆ ಇಂತಹ ಪ್ರಯೋಗಗಳು ಮತ್ತು calculated risks ಖಂಡಿತವಾಗಿಯೂ ಬೇಕು ಅನಿಸುತ್ತೆ.

ನೀವು ಸಿನಿಮಾ ನೋಡಿದಿರೇ?