ಮಳೆ ಯಾವತ್ತೂ ಹೀಗೆ 

ಹಸಿ ಬಿಸಿ ನೆನಪುಗಳನ್ನೇ 

ಹೊತ್ತು ತರುತ್ತದೆ.

ಈ ನೆನಪುಗಳೇ ಹಾಗೆ 

ಮಳೆಯ ಹಾಗೆ 

ಸುರಿಯಲಾರಾಂಭಿಸಿದರೆ 

ಎಡೆಬಿಡದೆ ಸುರಿಯುತ್ತಲೇ ಇರುತ್ತದೆ.


ಅಮ್ಮನ ಮಡಿಲ ಎಳೆಗೂಸಾಗಿ 

ಜಡೆಯ ಹೆಣೆಸಿಕೊಂಡು 

ಆಗಾಗ ಬೈಸಿಕೊಂಡು 

ಮುನಿಸಿಕೊಂಡು, ಪ್ರೀತಿಸಿಕೊಂಡು 

ಅಣ್ಣ ಅಕ್ಕಂದಿರ ಮುದ್ದಿನ ತಂಗಿಯಾಗಿ 

ಬೆಳೆದುದೊಂದು ನೆನಪು.


ಯವ್ವನದಲ್ಲಿ ಸ್ನೇಹಿತೆಯರೊಡಗೂಡಿ 

ಹೊಸ ಕನಸುಗಳ ಕಾಣುತ್ತಾ 

ಹೊಸತನ್ನು ಹುಡುಕುತ್ತಾ

ಯಾರಾದ್ದೋ ಕನಸುಗಳಲ್ಲಿ 

ಬೆಚ್ಚನೆಯ ನೆನಪಾಗುತ್ತಾ 

ಕಳೆದ ದಿನಗಳದ್ದು 

ಮತ್ತೊಂದು ಬಗೆಯ ನೆನಪು.


ಅವರಿವರನ್ನು ನೋಡಿ 

ಒಬ್ಬನನ್ನು ವರಿಸಿ 

ಹೊತ್ತು,ಹೆತ್ತು ಮಕ್ಕಳ ಬೆಳೆಸಿ 

ಯಾರದ್ದೋ ಬದುಕಿನಲ್ಲಿ 

ತನ್ನ ಅಸ್ತಿತ್ವವ ಹುಡುಕುತ್ತಾ ಬದುಕಿದ್ದು 

ಇನ್ನೊಂದು ಬಗೆಯ ನೆನಪು.


ನೆನಪುಗಳು ಹಾಗೆಯೆ ಬಿಡಿ 

ಮಳೆಯ ಹಾಗೆ.

ವೃದ್ದಾಪ್ಯಕ್ಕೆ ಬರೀಯ ಮೆಲುಕು.

-ನಿಶ್ಮಿತಾ ಪಳ್ಳಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ