ಬಾರೊ ಬಾರೊ ಮಳೆರಾಯ
ತಣಿಸು ಬಾರೊ ಈ ಧರಣಿಯ
ನೋಡೊಮ್ಮೇ ಬಿರುಕು ಬಿಟ್ಟ ಭೂಮಿಯ
ಬೆಂಬಿಸಿಲಿನ ಬೆಗೆ ತಾಳದೆ ನಲುಗುತ್ತಿರುವ ಜೀವ ರಾಶಿಯ
ಕರುಣಿಸಿ ಕಾಯೋ ಮಹನೀಯ
ಸುರಿಸು ತುಂತುರು ಹನಿಗಳ ರಾಶಿಯ
ದಹಿಸುತ್ತಿದೆ ಧರಣಿ ನೋಡಯ್ಯ
ದಣಿವರಿಯದೆ ದುಡಿಯುವ ರೈತರ ಗೋಳನ್ನು ಕೇಳಯ್ಯ
ಬೆಳೆಗಳು ಬೆಳೆಯಲು ಸಹಕರಿಸಯ್ಯ
ಮೂಕ ಪ್ರಾಣಿಗಳ ದಾಹವನ್ನು ತೀರಿಸಲು ಬಾರಯ್ಯ
ಹಸಿರಿನ ಚಿಗುರುಗಳನ್ನು ಬಾಡಿಸಬೇಡಯ್ಯ
ಉಸಿರಿನ ಮೂಲ ಹಸಿರನ್ನು ಉಳಿಸಯ್ಯ
ತಂಗಾಳಿಯ ಜೊತೆಗೆ ಬಾರಯ್ಯ
ತಂಪನೇರೆಯಲು ಬಾರಯ್ಯ
ತನುಮನ ತಣಿಸಲು ಬಾರಯ್ಯ
ಧರಣಿಯ ತಣಿಸೂ ಮಹಾರಾಯ
ರಚನೆ:--ತುಂಬೇನಹಳ್ಳಿ ಕಿರಣ್ ರಾಜು ಎನ್ ವಿಘ್ನೇಶ್ವರ ಪ್ರಿಯ