ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

← ಲೇಖಕರು
ರವಿ ಹಂಜ್
ಲೇಖಕರು

ರವಿ ಹಂಜ್

Ravi Hanj

ಫೆಬ್ರವರಿ ೨೬

೪೭೮ ವೀಕ್ಷಣೆಗಳು

ಲೇಖಕರ ಪರಿಚಯ

ಉತ್ತಮ ಬರಹಗಾರ ಹಾಗೂ ಅಂಕಣಕಾರರಾಗಿ ಹೆಸರುವಾಸಿಯಾಗಿರುವ ರವಿ ಹಂಜ್ ಅವರ ಹುಟ್ಟೂರು ದಾವಣಗೆರೆ. ಪ್ರಸ್ತುತ ಶಿಕಾಗೋ ನಿವಾಸಿ. ನಿರಂತರವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಬರಹಗಳನ್ನು ಬರೆಯುತ್ತಾ ಬಂದಿದ್ದಾರೆ. ಸರಳ ಭಾಷೆ, ಸ್ಪಷ್ಟ ಮತ್ತು ನಿಖರವಾದ…

ಉತ್ತಮ ಬರಹಗಾರ ಹಾಗೂ ಅಂಕಣಕಾರರಾಗಿ ಹೆಸರುವಾಸಿಯಾಗಿರುವ ರವಿ ಹಂಜ್ ಅವರ ಹುಟ್ಟೂರು ದಾವಣಗೆರೆ. ಪ್ರಸ್ತುತ ಶಿಕಾಗೋ ನಿವಾಸಿ. ನಿರಂತರವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಬರಹಗಳನ್ನು ಬರೆಯುತ್ತಾ ಬಂದಿದ್ದಾರೆ. ಸರಳ ಭಾಷೆ, ಸ್ಪಷ್ಟ ಮತ್ತು ನಿಖರವಾದ ಸಂಶೋಧನಾತ್ಮಕ ಬರವಣಿಗೆ ಇವರ ಹೆಗ್ಗಳಿಕೆ. ವೃತ್ತಿಯಿಂದ ಆಡಳಿತ ತಜ್ಞರಾಗಿದ್ದರೂ ಪ್ರವೃತ್ತಿಯಿಂದ ಲೇಖಕನಾಗಿರುವ ಇವರು ಕನ್ನಡದ ಹಲವಾರು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದಾರೆ. ‘ವಿಶ್ವವಾಣಿ’ ಪತ್ರಿಕೆಗೆ ‘ಬಸವ ಮಂಟಪ’ ಎನ್ನುವ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ‘ಹುಯೆನ್ ತ್ಸಾಂಗನ ಮಹಾಪಯಣ’ ಎನ್ನುವುದು ರವಿ ಹಂಜ್ ಅವರ ಐತಿಹಾಸಿಕ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಈಗಾಗಲೇ ೨೦೧೮ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ಈ ಕಾದಂಬರಿಯಲ್ಲಿ ಹುಯೆನ್ ತ್ಸಾಂಗನು ಪಯಣಿಸಿದ ಮಹಾ ದಾರಿಯ ಬಗ್ಗೆ ಹಾಗೂ ಭಾರತದ ಇತಿಹಾಸಕ್ಕೆ ಆತನ ಪ್ರವಾಸದಿಂದಾದ ಲಾಭದ ಬಗ್ಗೆ ವಸ್ತು ನಿಷ್ಟವಾದ ಮಾಹಿತಿ ನೀಡಿದ್ದಾರೆ. ಇದರ ಮೂಲಕ ಭಾರತದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವ ಸಾರ್ಥಕ ಪ್ರಯತ್ನವನ್ನು ರವಿಯವರು ಮಾಡಿದ್ದಾರೆ. ಹುಯೆನ್ ತ್ಸಾಂಗನಂತೆ ತಾವೂ ಸ್ವತಃ ಆತ ಸಾಗಿದ ಚೀನಾ - ಭಾರತದ ಮಹಾದಾರಿಯಲ್ಲಿ ಪಯಣಿಸಿ ಅದರಲ್ಲಿ ದೊರೆತ ಅನುಭವಗಳನ್ನು ಕ್ರೋಢೀಕರಿಸಿ ‘ಅಗಣಿತ ಅಲೆಮಾರಿ’ ಎನ್ನುವ ಕಾದಂಬರಿ ಬರೆದಿದ್ದಾರೆ. ಇದು ಎರಡೂ ದೇಶಗಳ ಸಾಮಾಜಿಕ ವ್ಯವಸ್ಥೆ, ರಾಜಕೀಯ ಸನ್ನಿವೇಶಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತದೆ. ಬಸವಣ್ಣನವರ ವಚನಗಳ ಬಗ್ಗೆ ಅಧ್ಯಯನ ನಡೆಸಿ ಬರೆದ ಪುಸ್ತಕ ‘ಬಸವರಾಜಕಾರಣ’. ಇದರ ಜೊತೆಗೆ ಭಾರತ -ಒಂದು ಮರುಶೋಧನೆ, ಅರಿದಡೆ ಆದದು, ಮರೆದೊಡೆ ಮೂರದು, ಅಮೇರಿಕೆಯಿಂದ ಅವಲೋಕಿಸುತ್ತ’ ಎನ್ನುವ ಕೃತಿಗಳನ್ನೂ ಬರೆದಿದ್ದಾರೆ. ‘ರ ಠ ಈ ಕ’ ಎಂಬ ವಿಚಿತ್ರ ಶೀರ್ಷಿಕೆಯ ಕೃತಿ ರವಿ ಹಂಜ್ ಅವರ ಆತ್ಮಕಥೆ. ತಮ್ಮ ಬಾಲ್ಯದಿಂದ ತರುಣಾವಸ್ಥೆಯವರೆಗಿನ ಘಟನಾವಳಿಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಎನ್ನುವ ಕ್ಲಾಸಿಕ್ ಕಾದಂಬರಿಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ. ಅನುವಾದಿತ ಕೃತಿ ಎಂದು ಗೊತ್ತೇ ಆಗದ ರೀತಿಯಲ್ಲಿ ಅವರ ಬರವಣಿಗೆಯ ಶೈಲಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆ ‘ಸ್ಪ್ಯಾನಿಷ್ ಗಾದೆಗಳು’ ಮತ್ತು ‘ಹ್ಯೂಯೆನ್ ತ್ಯಾಂಗ್ ನ ಮಹಾಪಯಣ’ (ತೆಲುಗು ಭಾಷೆ) ಎನ್ನುವ ಅನುವಾದಿತ ಕೃತಿಗಳನ್ನೂ ಹೊರ ತಂದಿದ್ದಾರೆ. ಬಹು ಭಾಷೆಗಳಲ್ಲಿ ಹಿಡಿತವನ್ನು ಹೊಂದಿರುವುದು ರವಿ ಹಂಜ್ ಅವರ ಹೆಗ್ಗಳಿಕೆ. ಇವರ ಇನ್ನಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ.

ಇವರ ಪುಸ್ತಕಗಳು (೧೨)

ಅಗಣಿತ ಅಲೆಮಾರಿ

ರವಿ ಹಂಜ್

ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಶಿವರಾಂಪೇಟೆ, ಮೈಸೂರು

೧೧೨

ಭಾರತ - ಒಂದು ಮರು ಶೋಧನೆ

ರವಿ ಹಂಜ್

ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಶಿವರಾಂಪೇಟೆ, ಮೈಸೂರು

೯೫

ಬಸವ ಮಂಟಪ

ರವಿ ಹಂಜ್

ವಿಶ್ವವಾಣಿ ಪುಸ್ತಕ

5 ೭೦
10% ರಿಯಾಯಿತಿ ₹650.00
ಈಗ ಖರೀದಿಸಿ
ಸಂಪದ ವಿಶೇಷ

ಈ ಲೇಖನಗಳನ್ನೂ ಓದಿ

ಎಲ್ಲವೂ →