ಆಶಾ ರಘು
Asha Raghu
೧೯೭೯ – ೨೦೨೬
೨೯೯ ವೀಕ್ಷಣೆಗಳು
ಆಶಾ ರಘು ಕನ್ನಡದ ಪ್ರಮುಖ ಲೇಖಕಿ, ಕಾದಂಬರಿಗಾರ್ತಿ, ಪ್ರಕಾಶಕಿ ಹಾಗೂ ಕಲಾವಿದೆಯಾಗಿದ್ದರು. ಆಶಾ ರಘು ಅವರ ಜನನವು 18 ಜೂನ್ 1979 ರಂದು ಬೆಂಗಳೂರುನಲ್ಲಾಯಿತು. ಇವರ ತಂದೆ ಕೇಶವ ಅಯ್ಯಂಗಾರ್ ಮತ್ತು ತಾಯಿ ಸುಲೋಚನಾ ಇವರು ಬಸವೇಶ್ವರ ನಗರದ ವಿದ್ಯಾವರ್ಧಕ ಸಂಘದ ಮಹಿಳಾ…
ಆಶಾ ರಘು ಕನ್ನಡದ ಪ್ರಮುಖ ಲೇಖಕಿ, ಕಾದಂಬರಿಗಾರ್ತಿ, ಪ್ರಕಾಶಕಿ ಹಾಗೂ ಕಲಾವಿದೆಯಾಗಿದ್ದರು. ಆಶಾ ರಘು ಅವರ ಜನನವು 18 ಜೂನ್ 1979 ರಂದು ಬೆಂಗಳೂರುನಲ್ಲಾಯಿತು. ಇವರ ತಂದೆ ಕೇಶವ ಅಯ್ಯಂಗಾರ್ ಮತ್ತು ತಾಯಿ ಸುಲೋಚನಾ ಇವರು ಬಸವೇಶ್ವರ ನಗರದ ವಿದ್ಯಾವರ್ಧಕ ಸಂಘದ ಮಹಿಳಾ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 'ಅಭಿನಯ ತರಂಗ' ನಾಟಕ ಶಾಲೆಯಿಂದ ರಂಗಭೂಮಿ ಡಿಪ್ಲೊಮಾ ಪಡೆದಿದ್ದರು. ಪ್ರಸಿದ್ಧ 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ' ಸೇರಿದಂತೆ ಹಲವು ಪ್ರಮುಖ ಕಾದಂಬರಿಗಳು ಮತ್ತು ಕಥಾಸಂಕಲನಗಳನ್ನು ಬರೆದಿದ್ದಾರೆ. 'ಉಪಾಸನ ಬುಕ್ಸ್' ಎಂಬ ಸ್ವಂತ ಪ್ರಕಾಶನ ಸಂಸ್ಥೆಯ ಮೂಲಕ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದರು. ಸಿನಿಮಾ ಹಾಗೂ ರಂಗಭೂಮಿ: ನಟಿಯಾಗಿ, ಸಂಭಾಷಣೆಕಾರ್ತಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳು ಕಾದಂಬರಿಗಳು: ಆವರ್ತ, ಗತ, ಮಾಯೆ, ಚಿತ್ತರಂಗ, ವಕ್ಷಸ್ಥಲ, ಮಾರ್ಕೋಲು. ಕಥಾಸಂಕಲನಗಳು: ಆರನೇ ಬೆರಳು, ಕೆಂಪು ದಾಸವಾಳ, ಬೊಗಸೆಯಲ್ಲಿ ಕಥೆಗಳು. ನಾಟಕಗಳು: ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ, ಪೂತನಿ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2014), ಸೂರ್ಯನಾರಾಯಣ ಚಡಗ ಪ್ರಶಸ್ತಿ, ಪಳಕಳ ಸೀತಾರಾಮಭಟ್ಟ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿ, ಸಾಹಿತ್ಯಮೃತ ಸರಸ್ವತಿ ಬಿರುದು (2023) ಮೊದಲಾದ ಪುರಸ್ಕಾರಗಳು ದೊರೆತಿವೆ. ಇವರು ಜನವರಿ 10, 2026ರಂದು ನಿಧನ ಹೊಂದಿದರು.