ಮುಖಪುಟ / ಪುಸ್ತಕ ಸಂಪದ / ಚಿಗುರು ಚಿವುಟಿದ ಫೇಸ್ಬುಕ್
ಚಿಗುರು ಚಿವುಟಿದ ಫೇಸ್ಬುಕ್

ಚಿಗುರು ಚಿವುಟಿದ ಫೇಸ್ಬುಕ್

ಲೇಖಕರು: ಲಕ್ಷ್ಮೀಕಾಂತ್ ಆರ್.

₹95.00 ₹120.00 21% ರಿಯಾಯಿತಿ ಲಭ್ಯವಿದೆ
₹೨೫ ಉಳಿತಾಯ (21% ರಿಯಾಯಿತಿ)

ಪುಸ್ತಕದ ಬಗ್ಗೆ

ಮನಸ್ಸಿನ ವೇದನೆಗಳನ್ನು ಅಳತೆ ಮಾಡಿ ನೋಡಲು ಸಾಧ್ಯವಿಲ್ಲ. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಹೋಗಲಾಡಿಸಲು ಅಸಾಧ್ಯ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಓದು ಕುಗ್ಗಿದ ಬದುಕನ್ನು ಹಿರಿ ಹಿಗ್ಗುವಂತೆ ಮಾಡುತ್ತದೆ. ಸದಾ ಉತ್ಸಾಹದ ಚಿಲುಮೆಯಂತೆ ಕ್ರಿಯಾಶೀಲವಾಗಿರಲು ಪ್ರೋತ್ಸಾಹಿಸುತ್ತದೆ. ನಶ್ಚರ ಜಗತ್ತಿನ ಋಣತ್ಮಾಕತೆಯನ್ನು ಕಡೆಗಣಿಸುವಂತೆ ಮಾಡಿ ನಿಸ್ತೇಜ ಬದುಕಿಗೆ ಚಲನೆ ನೀಡುತ್ತದೆ. ಚೆಲುವು ಒಲವುಗಳನ್ನು ತೂಗಿ ನೋಡಲು ಮಾನದಂಡ ಕಲ್ಪಿಸಿ ಮನುಷ್ಯನ ಬೌದ್ಧಿಕತೆಯನ್ನು ಹೆಚ್ಚಿಸುತ್ತದೆ. ವಾಸ್ತವ ಮತ್ತು ಕಲ್ಪನೆಗಳ ನಡುವಿನ ಕೆಲವು ಸಾಮರಸ್ಯದ ಹೊಳಹುಗಳು ಒಮ್ಮೊಮ್ಮೆಗೊಂದಲ ಸೃಷ್ಟಿಸಿದರು ಅರಿವು ಮೂಡಿಸುವಲ್ಲಿ ಸಾಹಿತ್ಯ ಸಫಲವಾಗುತ್ತದೆ. ಆಲಸ್ಯದ ಅಂಶಗಳನ್ನು ನಿಶ್ಲೇಷವಾಗಿ ಭಾಗಿಸಿ ಅಧ್ಯಯನದ ಅನಂತತೆಯನ್ನು ವಿಸ್ತಾರವಾಗಿಸುತ್ತದೆ. ಗಂಡಾಗಲಿ ಹೆಣ್ಣಾಗಲಿ ಸುಪ್ತ ಬಯಕೆಗಳನ್ನು ಎದೆಯಲ್ಲಿ ಅದುಮಿಟ್ಟುಕೊಂಡರೆ ವಿಷಯ ಕಲುಷಿತವಾಗುತ್ತದೆ.ಅದನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸುತ್ತ ಹೋದರೆ ಸುಂದರ ರೂಪ ಪಡೆದ ಕಥೆಯಾಗುತ್ತದೆ. ಅದು ಬೇರೊಬ್ಬರ ಬದುಕಿಗೆ ಆಶಾಕಿರಣವಾದರು ಆಶ್ಚರ್ಯವೇನಿಲ್ಲ. ಗೌಣವಾದ ಬುದ್ದಿವಂತಿಕೆಯನ್ನು ತೆರೆದ ಕನ್ನಡಿಯಲ್ಲಿ ಇಟ್ಟಾಗ ಸಮಾಜಮುಖಿಯಾಗಿ ಸಾಕಷ್ಟು ದಿಕ್ಕುಗಳನ್ನು ಪಡೆದುಕೊಳ್ಳುತ್ತದೆ. ನಂತರ ದಿಕ್ಕುಗಳೇ ದಿಗಂತವಾಗಿ ಹೊಸ ಲೋಕದ ಪರಿಚಯಕ್ಕೆ ಕಾರಣವಾಗುತ್ತದೆ. ಕಥೆಯ ಆಳ ವಿಸ್ತಾರಗಳನ್ನು ಅಳೆಯುವ ಮಾಪನ ಹೃದಯವೇ ಆದರೂ ಅದನ್ನು ನಿಯಂತ್ರಿಸುವ ಮನಸ್ಸು ನಿತ್ಯಶೋಭಿತವಾದದ್ದು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹95.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?