ತರ್ಕಕ್ಕೆ ನಿಲುಕದ್ದು...!
ಲೇಖಕರು: ಗಿರೀಶ ಶ್ರೀಪಾದ ಮೇವುಂಡಿ
₹132.00
₹170.00
22% ರಿಯಾಯಿತಿ
ಲಭ್ಯವಿದೆ
₹೩೮ ಉಳಿತಾಯ (22% ರಿಯಾಯಿತಿ)
ಪುಸ್ತಕದ ಬಗ್ಗೆ
ಮನುಷ್ಯನ ಅರಿವಿನ ಮಿತಿಗೆ ಮೀರಿದ ಅಗಾಧತೆ ಹಾಗೂ ರಹಸ್ಯಗಳನ್ನು ಹೊಂದಿರುವ ಈ ಬ್ರಹ್ಮಾಂಡವು ಅನೇಕ ವಿಸ್ಮಯಗಳ ತವರಾಗಿದೆ.ಇಲ್ಲಿ ಕಾಣುತ್ತಿರುವುದೆಲ್ಲ ಅತ್ಯಲ್ಪ ಹಾಗೂ ಕಾಣದೇ ಉಳಿದಿರುವುದೇ ಅತ್ಯಧಿಕ! ಆಧುನಿಕ ಮನುಷ್ಯನು ಇಲ್ಲಿ ತನಗೆ ನಿಲುಕಿದಷ್ಟನ್ನು ಮಾತ್ರ ವಿಜ್ಞಾನವೆಂಬ ದುರ್ಬೀನಿನಲ್ಲಿ ನೋಡುತ್ತಾ ಕಾಲ ಕ್ರಮೇಣ -ಇವುಗಳ ರಹಸ್ಯಗಳನ್ನು ಭೇದಿಸುತ್ತಿರುವುದು ಒಂದು ಕಡೆ ಹೆಗ್ಗಳಿಕೆಯ ವಿಷಯವಾದರೆ, ಮತ್ತೊಂದೆಡೆ ವಿಜ್ಞಾನದ ತರ್ಕಕ್ಕೆ ಸಿಗದ ಅನೇಕ ಸಂಗತಿಗಳು ಅವುಗಳ ರಹಸ್ಯವನ್ನು ಬಿಟ್ಟುಕೊಡಲಾರದೆ ಆಧುನಿಕ ವಿಜ್ಞಾನಿಗಳನ್ನು ಸತಾಯಿಸುತ್ತಲೇ ಇವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ವೇದ ಕಾಲದ ಋಷಿ-ಮುನಿಗಳು,ಜ್ಞಾನಿಗಳು ಹಾಗೂ ಸಾಧಕರು ತಮ್ಮ ವಿಶೇಷವಾದ ಸಾಧನೆಗಳಿಂದ ಅತೀಂದ್ರಿಯ ಶಕ್ತಿಗಳನ್ನು ಸಂಪಾದಿಸಿ ಈ ರಹಸ್ಯಗಳನ್ನೆಲ್ಲಾ ಭೇದಿಸಿ ನಿರೂಪಿಸಿದ್ದರೂ ಆಧುನಿಕರಾದ ನಾವು ಕಾಲಾನುಕ್ರಮದಲ್ಲಿ ಈ ಪ್ರಕೃತಿಯೊಂದಿಗಿನ ಸಂಪರ್ಕವನ್ನು ಕಡಿದುಕೊಂಡಿದ್ದರಿಂದ ಈ ಅಗೋಚರ ಸಂಗತಿಗಳಿಂದ ದೂರವಾಗಿ ಕಣ್ಣಿಗೆ ಕಂಡಿದ್ದು ಹಾಗೂ ಅನುಭವಕ್ಕೆ ಬಂದದ್ದು ಮಾತ್ರ ಸತ್ಯವೆಂಬ ಭ್ರಮೆಯಲ್ಲಿದ್ದೇವೆ.
ಆದರೆ ಈ ಅಗಾಧ ಬ್ರಹ್ಮಾಂಡವು ನಮ್ಮ ಬುದ್ಧಿಯ ಪರಿಮಿತಿಗೆ ಮೀರಿದ ಅನೇಕ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ಹಾಗಾದರೆ ಈ ನಿಗೂಢ ಬ್ರಹ್ಮಾಂಡದಲ್ಲಡಗಿರುವ ರಹಸ್ಯಗಳೆಷ್ಟು? ಇದರ ವಿವಿಧ ಆಯಾಮಗಳಾವುವು? ಮನುಷ್ಯನ ಕಲ್ಪನೆಗೂ ನಿಲುಕದ ಇಲ್ಲಿನ ಅಗೋಚರ ಶಕ್ತಿಗಳಾವುವು? ಈ ನಿಗೂಢ ಶಕ್ತಿಗಳು ಹೇಗೆ ಕೆಲಸಮಾಡುತ್ತವೆ? ಹಾಗೂ ಇವುಗಳನ್ನು ನಾವು ಯಾವ ರೀತಿ ನಮ್ಮೊಳಿತಿಗಾಗಿ ಬಳಸಿಕೊಳ್ಳಬಹುದೆಂಬ ವಿವಿಧ ಕೌತುಕದ ಪ್ರಶ್ನೆಗಳಿಗೆ ಉತ್ತರ ರೂಪದ ಪ್ರಯತ್ನವೇ ಈ 'ತರ್ಕಕ್ಕೆ ನಿಲುಕದ್ದು' ಎಂಬ ಕೃತಿಯ ಸಾರ...
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹132.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.