ಪುಟ್ಟ ತಮ್ಮನ ಕಗ್ಗ
ಲೇಖಕರು: ಅನಂತ ಭಟ್ ಪೊಳಲಿ
ಪ್ರಕಾಶಕರು: ಕಲ್ಕೂರ ಪ್ರಕಾಶನ, ಮಂಗಳೂರು
₹75.00
ಲಭ್ಯವಿದೆ
ಪುಸ್ತಕದ ಬಗ್ಗೆ
ಜೀವನವನ್ನು ಹದಗೊಳಿಸುವ ನಾನಾ ಶಕ್ತಿಗಳಲ್ಲಿ ದೈವ ಭಕ್ತಿಯೂ ಒಂದು. ಸುಸಂಸ್ಕೃತ ಮನೆತನದ ಅನಂತ ಭಟ್ ಇವರ ಸಂಸ್ಕೃತಿ ಪದ್ಯದುದ್ದಕ್ಕೂ ಎದ್ದು ಕಾಣುತ್ತದೆ. ಸೂಕ್ಷ್ಮವಾಗಿ ಅವಲೋಕಿಸಿ ಪುಟ್ಟ ತಮ್ಮನಿಗೆ ಬಗೆ ಬಗೆಯಾಗಿ ಬೋಧಿಸುತ್ತಾರೆ. ವ್ಯಕ್ತಿ ಆಶೆ, ಆಕಾಂಕ್ಷೆ. ಬುದ್ದಿ. ಭಾವಗಳ ಮೊತ್ತವಾಗಿರುತ್ತಾನೆ. ನಾನು ಎಂಬ ಅಹಂಕಾರವೂ ಮಧ್ಯದಲ್ಲಿ ರಾರಾಜಿಸುತ್ತದೆ. ಇದೆಲ್ಲ ಗುಣಗಳನ್ನು ಗಮನಿಸಿ ಪುಟ್ಟ ತಮ್ಮನಿಗೆ ನೀತಿ ಬೋಧೆಯಿದೆ. ಹುಟ್ಟು, ಸಾವು, ಆತ್ಮ. ಪರಮಾತ್ಮ ಎಂಬ ಆಧ್ಯಾತ್ಮಿಕ ವಿಚಾರವೂ ಅಲ್ಲಲ್ಲಿ ನುಸುಳಿದೆ. ಬದುಕೆಂಬುದು ವಿವೇಕದ ಅನ್ವೇಷಣೆಯೆಂಬ ಚಿಂತನೆಯಿದೆ. ಗಣಪತಿಯ, ವಿಷ್ಣುವಿನ, ಶಿವನ, ಸೂರ್ಯದೇವನ, ದುರ್ಗಾ ದೇವಿಯ ಹನ್ನೆರಡು ಹನ್ನೆರಡು ಹೆಸರುಗಳನ್ನು ಕಗ್ಗದಲ್ಲಿ ನಿರೂಪಿಸಿದ್ದು ಶ್ಲಾಘನೀಯವಾಗಿದೆ. ಮಹಾಗಣಪತಿಯ ದ್ವಾತ್ರಿಂಶದ್ರೂಪಗಳು ದುರ್ಗಾದೇವಿಯ 108 ನಾಮಗಳನ್ನು ಸಹ ಕಗ್ಗದಲ್ಲಿ ಸೇರಿಸಿದ್ದು ಮಹತ್ವಪೂರ್ಣವಾಗಿದೆ. ಸಮಾಜದಲ್ಲಿರುವ ಓರೆಕೋರೆಗಳ ತಿದ್ದುವಿಕೆಗೆ ಈ ಕೃತಿ ದಾರಿದೀಪವಾಗಿದೆ. ದುಷ್ಟ ಜನರಲ್ಲಿರುವ ದುಷ್ಟ ಭಾವನೆಯನ್ನು ಹೋಗಲಾಡಿಸಿ ಸದ್ಭುದ್ಧಿಯನ್ನು ಕರುಣಿಸುವಂತೆ ಭಗವಂತನಲ್ಲಿ ಯಾಚಿಸೆಂದು ಪುಟ್ಟತಮ್ಮನಿಗೆ ಬೋಧಿಸುವ ಸಂದರ್ಭವೂ ಇಲ್ಲಿ ಇದೆ. - ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷರು, ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು (ಬೆನ್ನುಡಿಯಲ್ಲಿ ಕಂಡ ಬರಹ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹75.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.