ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ
ಲೇಖಕರು: ಡಾ. ಎಂ. ಚಿದಾನಂದ ಮೂರ್ತಿ
₹350.00
ಲಭ್ಯವಿದೆ
ಪುಸ್ತಕದ ಬಗ್ಗೆ
ಹಿಂದೂ ಧರ್ಮವು ಮೋನಿಯರ್ ವಿಲಿಯಮ್ಸ್ ಹೇಳಿದಂತೆ ಒಂದು ಸರಳ ಹೊಳೆ ಅಥವಾ ನದಿ ಅಲ್ಲ; ಹಲವು ನದಿಗಳನ್ನು ಕೂಡಿಸಿಕೊಂಡು ಹರಿಯುವ ಗಂಗೆಯಂತೆ ಮಹಾನದಿ. ಸತ್ಯವು ಬಹುಮುಖಿ ಎಂಬ ಅರಿವು ಆ ಸಿದ್ಧಾಂತದಲ್ಲೇ ಇರುವುದರಿಂದ ಸಹನೆ ಅದರ ಪ್ರಮುಖ ಗುಣ. ಶೈವ, ವೈಷ್ಣವ, ಶಾಕ್ತ ಪಂಥಗಳಿಗಾಗಲಿ ಶಂಕರ, ರಾಮಾನುಜ, ಮಧ್ವ, ವಲ್ಲಭಾಚಾರರಂಥ ತತ್ತ್ವಜ್ಞರಿಗಾಗಲಿ ಬಸವ, ಜ್ಞಾನೇಶ್ವರ್, ಕನಕದಾಸ, ಪುರಂದರದಾಸ, ಮೀರಾರಂಥ ಭಕ್ತರಿಗಾಗಲೀ, ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ, ಅರಬಿಂದೋರಂಥ ಸಾಧಕರಿಗಾಗಲಿ ವೇದಗಳೇ ಮೂಲ ಸ್ಫೂರ್ತಿ. ಆ ಮಹನೀಯರಲ್ಲಿ ಒಂದಿಬ್ಬರ ಮಾತುಗಳಲ್ಲಿ ಅಕಸ್ಮಾತ್ ವೇದಗಳ ಖಂಡನೆ ಬಂದಿದ್ದರೆ ಅದು ಸಾರಾಸಗಟಾದ ಖಂಡನೆ ಅಲ್ಲ; ವೇದಗಳನ್ನು ಬಾಯಲ್ಲಿ ಪಠಿಸುತ್ತ ಅನಾಚಾರದ ಬದುಕನ್ನು ಬದುಕುತ್ತಿದ್ದವರ ಖಂಡನೆ ಮಾತ್ರ. ಇದು ಮುಖ್ಯ ನಮಗೆ ವೇದಗಳು ಹಿಂದೂಧರ್ಮದ ಸಿದ್ಧಾಂತ ಮತ್ತು ಮತಾಚಾರಗಳಿಗೆ ಅಡಿಗಲ್ಲು ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವೇ ಒಪ್ಪಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹350.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.