ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ರಾತ್ರಿ

Girish Shetty ಆಗಸ್ಟ್ ೦೬ ಪುಟ ೬೪ ವೀಕ್ಷಣೆ

ದಿನಾಂಕ: ಜುಲೈ ೨೦, ೨೦೦೮ ರಾತ್ರಿ ಕತ್ತಲು ಬದುಕ ಮುತ್ತುವ ಮೊದಲೆ ಮನೆ, ಮನ ಮುಟ್ಟುವ ತವಕ ಗೂಡತ್ತ ಹಾರುವ ಹಕ್ಕಿಗಳು ಸೂರ ಹುಡುಕಿ ಹೊರಡುವತ್ತ ಇಳಿವಯಸ್ಸಿನ ಮುದಿಯನಂತೆ ಕಡಲಾಳದಿ ಇಳಿದ ಪಡುವಣ ರವಿ ಬಿಸಿಲು ಕೆಂಪಾಯಿತು,...

ಕವಲು ದಾರಿ

Girish Shetty ಆಗಸ್ಟ್ ೦೬ ಪುಟ ೬೧ ವೀಕ್ಷಣೆ

ದಿನಾಂಕ: ಎಪ್ರಿಲ್ ೯, ೨೦೦೮ ಕವಲು ದಾರಿ ಇರುಳು ಕಳೆದು ಹಗಲು ಮುತ್ತಿದರೂ ಬದುಕಿನ್ನೂ ಅರೆಗತ್ತಲಲಿ ಊಹು! ಏನೂ ಕಾಣಿಸುತ್ತಿಲ್ಲ ಮನಸಿಗೆ ಮುಚ್ಚಿದ ಕಣ್ಣು ತೆರೆದರೂ ಬಂದಿಸಿದ ಭಾವನೆಗಳ ಬಿಡಿಸಿದರೂ ಮನಸ್ಸು, ಕನಸು ಎಲ್ಲಾ ಗ...

ಏನು ಮಾಡಲಿ ನಾನು..?

ಸವಿತ ಎಸ್.ಆರ್. ಆಗಸ್ಟ್ ೦೬ ಬ್ಲಾಗ್ ೨,೦೩೦ ವೀಕ್ಷಣೆ

ಮೊಗ್ಗರಳಿ ಹೂವಾಗಿ, ಮರಿದುಂಬಿ ಹಾರಾಡಿ, ಹಸಿರಾದ ಕಾಯಾಗಿ, ರಸ ತುಂಬಿ ಹಣ್ಣಾಗಿ, ಕೈ ಬೀಸಿ ಕರೆಯುತಿರೆ... ಎನ್ನ ಮನೆಯಂಗಳದ ಮಾವು.. ಏನು ಮಾಡಲಿ ನಾನು..? ಕವನ ಬರೆಯಲೇ... ಇಲ್ಲ ಕತೆಯ ಕಟ್ಟಲೆ... ಪದ ಪದಗಳ ಜೋಡಿಸಿ ಪದ್ಯ...

No free left turn - ನಾನು ಇಂಗ್ಲೀಷ್ ಓದಲ್ಲ

ವಿಕಾಸ್ ಹೆಗಡೆ ಆಗಸ್ಟ್ ೦೬ ಚರ್ಚಾವೇದಿಕೆ ೭,೮೯೨ ವೀಕ್ಷಣೆ

ನಾನು ರಸ್ತೆಯಲ್ಲಿ ಓಡಾಡುವಾಗ ಬಹಳ ಕಡೆಗಳಲ್ಲಿ ನೋಡುತ್ತೇನೆ. ಟ್ರಾಫಿಕ್ ಸೂಚನೆಗಳನ್ನು ಬರೀ ಇಂಗ್ಲೀಷಿನಲ್ಲಿ ಹಾಕಿರುತ್ತಾರೆ. ನಾನು ಹೋಗುವ ದಾರಿಯಲ್ಲಿ ಒಂದು ಕಡೆ no free left turn ಎಂದು ಬರೆದಿದ್ದಾರೆ. ಅಲ್ಲಿ ಯಾವು...

‘ನಮ್ಮ ಒಕ್ಕಲಿಗ ಒಕ್ಕಿ ಜಗದ ಒಡಲು ತುಂಬಿಸಿದ..ಆದರೆ ಸ್ವತ: ಬಿಕ್ಕಿದ’

harshavardhan v. sheelavant ಆಗಸ್ಟ್ ೦೬ ಪುಟ ೩೬ ವೀಕ್ಷಣೆ

ವಿಶ್ವ ಬ್ಯಾಂಕಿನ ಅಂದಾಜಿನ ಪ್ರಕಾರ ಕ್ರಿಸ್ತ ಶಕ ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು ಯುನೈಟೆಡ್ ಕಿಂಗಡಂ,...

ಗಣನೆ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೧,೧೧೩ ವೀಕ್ಷಣೆ

ಮನೆಯೊಳೋ ಮಠದಳೋ ಸಭೆಯೊಳೋ ಸಂತೆಯೊಳೊ| ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ|| ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು| ನೆನೆಯದಾತ್ಮದ ಸುಖವ-ಮಂಕುತಿಮ್ಮ||

ಜೀವನ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೬೯೮ ವೀಕ್ಷಣೆ

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು| ಒಳಿತನಾಗಿಸು, ಕೊಡುತ ಕೊಳುತ ಸಂತಸವ|| ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು| ಮಿಳಿತನಿರು ವಿಶ್ವದಲಿ- ಮಂಕುತಿಮ್ಮ||

ಬಾಳದೋಣಿ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೬೪೨ ವೀಕ್ಷಣೆ

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು | ತೇಲುತ್ತೆ ಭಯವ ಕಾಣದೆ ಸಾಗುತಿರಲು || ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ | ಮೇಲ ಕೀಳಗಿಪುದು - ಮಂಕುತಿಮ್ಮ||

ಬದುಕು

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೫೭೧ ವೀಕ್ಷಣೆ

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ| ಭವಿಷಿಯವ ಚಿಂತಿಸದೆ ಬದುಕ ನೂಕುತಿರು|| ವಿವರಗಳ ಜೋಡಿಸುವ ಯಜಮಾನ ಬೇರಿಹನು| ಸವೆಸು ನೀಂ ಜನುಮವನು- ಮಂಕುತಿಮ್ಮ||

ಅನ್ನ ಋಣ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೮೪೫ ವೀಕ್ಷಣೆ

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ| ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ|| ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು| ಸಂದಿರುವುದನ್ನ ಋಣ- ಮಂಕುತಿಮ್ಮ||

ಸತ್ಯವೆಲ್ಲಿ?

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೫೯೬ ವೀಕ್ಷಣೆ

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ| ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ|| ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ| ತತ್ತ್ವದರ್ಶನವಹುದು- ಮಂಕುತಿಮ್ಮ||

ಯತ್ನ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೫೨೧ ವೀಕ್ಷಣೆ

ಅರೆದಿನದ ನಮ್ಮ ಯತ್ನದಿನದೇನೆನ್ನದಿರು| ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ|| ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ?| ಕಿರುಜಾಜಿ ಸೊಗಕೊಡದೆ?- ಮಂಕುತಿಮ್ಮ||

ಉದರದೈವ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೫೯೯ ವೀಕ್ಷಣೆ

ಉದರದೈವಕೆ ಜಗದೊಳೆದುರು ದೈವದದೆಲ್ಲಿ| ಮೊದಲದರ ಪೂಜೆ;ಮಿಕ್ಕೆಲ್ಲವದರಿಂದ|| ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ| ಹದದೊಳಿರುಸುವುದೆಂತೊ?- ಮಂಕುತಿಮ್ಮ||

ಹೂವು

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೭೭೧ ವೀಕ್ಷಣೆ

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ| ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ|| ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ| ಬಿಡಿಗಾಸು ಹೂವಳಗೆ- ಮಂಕುತಿಮ್ಮ||

ತಿಳಿವು

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೬೪೬ ವೀಕ್ಷಣೆ

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ| ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ|| ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು| ಇಳೆಯೊಳಗದೊಂದು ಸೊಗ- ಮಂಕುತಿಮ್ಮ||

ಮನ

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೫೮೬ ವೀಕ್ಷಣೆ

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ| ತಳದ ಕಸ ತೇಲುತ್ತ ಬಗ್ಗಡವದಹು|| ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ| ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ|| (ಲೋಗರು= ಅದರ ಒಳಗಿಳಿಯೆ)

ದುಡುಕದಿರು

ಸವಿತ ಎಸ್.ಆರ್. ಆಗಸ್ಟ್ ೦೬ ಉಲ್ಲೇಖಗಳು ೬೦೭ ವೀಕ್ಷಣೆ

ಒಡೆಯದಿರು ತಳಹದಿಯ ಸರಿವಡಿಪೆನದನೆಂದು| ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?|| ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ?| ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ||

ಓಲೆಕಾರ

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೬೫೩ ವೀಕ್ಷಣೆ

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?| ಓಲೆಗಳನವರವರಿಗೈದಿಸಿರೆ ಸಾಕು|| ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ| ಕಾಲೋಟವವನೂಟ- ಮಂಕುತಿಮ್ಮ||

ಸುಖಿ

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೬೪೯ ವೀಕ್ಷಣೆ

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು| ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು|| ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು| ಬಗೆಯಲರಿತವನೆ ಸುಖಿ- ಮಂಕುತಿಮ್ಮ||

ವಿಧಿ

ಸವಿತ ಎಸ್.ಆರ್. ಆಗಸ್ಟ್ ೦೫ ಉಲ್ಲೇಖಗಳು ೭೩೬ ವೀಕ್ಷಣೆ

ಹೊಟ್ಟೆಯೊಂದರ ರಗಳೆ ಸಾಲದಂದೇನೊ ವಿಧಿ| ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್|| ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ| ದಿಟ್ಟಿಸುತ ಕರುಬುವೆಯೊ- ಮಂಕುತಿಮ್ಮ||