ಸೂರ್ಯನಪ್ರಕಾಶಮಾನವಾದಕಿರಣಗಳುಕಿಟಕಿಯಸರಳುಗಳನ್ನುಭೇಧಿಸಿಕೊಂಡುಬಂದುಕಣ್ಣುಚುಚ್ಚಿದಾಗಲೇಓಹ್...ಬೆಳಗಾಯಿತುಗೊತ್ತಾಗಿದ್ದು. ಆಸೂರ್ಯನಿಗೆಅದೇನುಆತುರವೋಗೊತ್ತಿಲ್ಲ, ಇಷ್ಟುಬೇಗಎದ್ದುಬಿಡುತ್ತಾನೆ. ಅಥವಾಅವನಿಗೂಯಾರಾದರೂಅಲಾರಂಇಟ್ಟಿರುತ್ತಾರ??!!. ಇಷ್ಟುವರ್ಷದಿಂದಹೆಚ್ಚುಕಡಿಮೆಒಂದೇಸಮಯಕ್ಕೆಎದ್ದುಬಿಡುತ್ತಾನೆ. ಒಂದುದಿವಸವಾದರೂನಿಧಾನವಾಗಿಏಳಬಾರದ? ಹಾಗೆಂದುದಿನವೂಅಂದುಕೊಳ್ಳುತ್ತೇನೆ...ಆದರೆಅವನುಮಾತ್ರಬದಲಾಗಿಲ್ಲ. ಹೌದುಕಾಲಬದಲಾಯಿತು, ಜನಬದಲಾದರು, ಜನರಮನಸುಗಳೂಬದಲಾಯಿತು. ಆದರೆಅವನುಮಾತ್ರನಿಶ್ಚಲ.
ಎದ್ದುಒಮ್ಮೆಸಮಯನೋಡಿದರೆಇನ್ನೂಎಂಟೂವರೆಘಂಟೆತೋರಿಸುತ್ತಿತ್ತು. ಕನ್ನಡಿಯಮುಂದೆಹೋಗಿನಿಂತರೆಕಣ್ಣುಗಳುಹೆಡ್ಲೈಟಿನಹಾಗೆಆಗಿದ್ದವು. ರಾತ್ರಿಕುಡಿದರಮ್ಮಿನಪ್ರಭಾವಅದಾಗಿತ್ತು. ನನ್ನಬಾಯಿನನಗೆವಾಕರಿಕೆತರಿಸುತ್ತಿತ್ತು. ಆದರೆಇದೇನುಹೊಸದಲ್ಲ. ದಿನಬೆಳಿಗ್ಗಿನಕಥೆಯೇಅಲ್ಲವೇ?. ರೂಮಿನಲ್ಲಿನೋಡಿದರೆಅದೆಷ್ಟೋರುಂಡಕಳೆದುಕೊಂಡುಬರೀಮುಂಡಮಾತ್ರಉಳಿಸಿಕೊಂಡುಅನಾಥಶವಗಳಂತೆಬಿದ್ದಿದ್ದಸಿಗರೇಟಿನತುಂಡುಗಳು, ಬ್ರಾಂಡಿನವ್ಯತ್ಯಾಸವಿಲ್ಲದೆಅಣ್ಣತಮ್ಮಂದಿರಂತೆಒಂದೇಕಡೆಗುಂಪಾಗಿಬಿದ್ದಿದ್ದಖಾಲಿಬಾಟಲಿಗಳು...
ಇವೆಲ್ಲವನ್ನೂನೋಡಿದರೆಯಾರುಬೇಕಾದರೂಆರಾಮಾಗಿಹೇಳಿಬಿಡಬಹುದಾಗಿತ್ತು. ಇದೊಂದುಭಗ್ನಪ್ರೇಮಿಯರೂಮೆಂದು. ಮೊಬೈಲಿನಲ್ಲಿಡೇಟ್ಫೆಬ್ರವರಿ 14 ಎಂದುತೋರಿಸುತ್ತಿತ್ತು. ಇವತ್ತಿಗೆಸರಿಯಾಗಿಆರುವರ್ಷಆಗಿತ್ತುನನ್ನಲವ್ವಿಗೆಪೋಸ್ಟ್ಮಾರ್ಟಂ ಆಗಿ. ಪ್ರತಿವರ್ಷಇದೆದಿನಾಂಕದಂದುಕಾಲೇಜಿನಬಳಿಹೋಗುತ್ತಿದ್ದಅಭ್ಯಾಸಇಟ್ಟುಕೊಂಡಿದ್ದೇನೆ. ಅಲ್ಲಿಗೆಹೋದರೆಅವಳೇನುಬರುವುದಿಲ್ಲ. ಆದರೆಆನೆನಪುಗಳುಒಂದೆರೆಡುದಿನಕ್ಕಾಗುವಷ್ಟುಕಿಕ್ಕೊಡುತ್ತದೆಎಂದುಅಷ್ಟೇ. ಅಸಲಿಗೆಅವಳಅಮಲುಇಳಿದಿದ್ದರೆಅಲ್ವ...
ಎರಡುವಾರವಾಗಿತ್ತುಶೇವ್ಮಾಡಿ...ಮೊದಲಾಗಿದ್ದರೆವಾರಕ್ಕೆಎರಡುದಿನ....ಅವಳಿಗೆಗಡ್ಡಎಂದರೆಆಗುತ್ತಿರಲಿಲ್ಲ...ಯಾವಾಗಲೂನೀಟ್ಶೇವ್ಇರಬೇಕುಎನ್ನುತ್ತಿದ್ದಳು. ಸರಿಇವತ್ತುಶೇವ್ಮಾಡಿಕೊಳ್ಳೋಣಎಂದೆನಿಸಿಶೇವ್ಮಾಡಿಸ್ನಾನಮಾಡಿರೆಡಿಆಗಿಕಾಲೇಜಿನಬಳಿ ಬಂದೆ. ಹೋದವರ್ಷಕ್ಕೂಇವಾಗಲೂಬಹಳಷ್ಟುಬದಲಾವಣೆಆಗಿದೆ. ನನ್ನಲ್ಲಿಮಾತ್ರಯಾವುದೇಬದಲಾವಣೆಆಗಿರಲಿಲ್ಲ. ಒಂದೇಒಂದುಎಂದರೆಹೋದವರ್ಷಇದ್ದಕಂಪನಿಬಿಟ್ಟುಹೊಸಕಂಪನಿಸೇರಿದ್ದೇಅಷ್ಟೇ. ಅದೂನನಗಾಗಿಅಲ್ಲ....ಮನೆಯವರಿಗಾಗಿ...ಅಪ್ಪಅಮ್ಮನಿಗಾಗಿ.
ಆರುವರ್ಷದಹಿಂದೆನಾವುಗಳುಕುಳಿತುಕೈಯಲ್ಲಿಸಿಗರೇಟ್ಸೇದುತ್ತಾ ಹೋಗಿಬರುತ್ತಿದ್ದಹುಡುಗಿಯರನ್ನುರೇಗಿಸುತ್ತಿದ್ದಕಟ್ಟೆಇದ್ದಜಾಗದಲ್ಲಿಈಗಸಣ್ಣದಾದಪಾರ್ಕೊಂದುಬಂದಿದೆ. ಈಪಾರ್ಕುಮುಂಚೆಏನಾದರೂಇದ್ದಿದ್ದರೆ...ಅಲ್ಲೇಒಂದುಹೂಕಿತ್ತುಅವಳಿಗೆಕೊಡುತ್ತಿದ್ದೆನೇನೋ...ಅದೇಕಟ್ಟೆಯಮೇಲೆಕುಳಿತಿದ್ದಾಗಲೇಅಲ್ಲವೇನನಗೂಅವಳಿಗೂಲವ್ಆಗಿದ್ದು. ನನಗೆಇವತ್ತಿಗೂಅನುಮಾನ....ಅದುಹೇಗೆಲವ್ವಾಯಿತೋಗೊತ್ತಿಲ್ಲ...ಇಬ್ಬರೂಒಬ್ಬರಿಗೊಬ್ಬರೂಹೇಳಿಕೊಂಡಿರಲಿಲ್ಲ..ಆದರೂಲವ್ವಾಗಿತ್ತು. ಅಲ್ಲಿಯವರೆಗೂಕಾಲೇಜಿನಆಂಗ್ರಿಯಂಗ್ಮೆನ್ಆಗಿದ್ದನಾನುಅಂದಿನಿಂದಚಾಕಲೇಟ್ಹೀರೋಆದೆ.
ಬ್ಲೇಡ್ಕಾಣದಗಡ್ಡಕ್ಕೆವಾರಕ್ಕೆರಡುಬಾರಿಬ್ಲೇಡ್ಕಾಣುವಸೌಭಾಗ್ಯಒದಗಿಸಿದೆ. ಅವಳೆದುರಿಗೆಕೆಟ್ಟಕೆಲಸಮಾಡುವಂತಿರಲಿಲ್ಲ, ಅಂದರೆಕಟ್ಟೆಯಮೇಲೆಕುಳಿತುಹುಡುಗಿಯರನ್ನುರೇಗಿಸುವಂತಿಲ್ಲ,ಸಿಗರೇಟ್ ಸೇದುವಂತಿಲ್ಲ...ಅದೂ ಇದೂ ಏನೇನೋ ಕಂಡೀಷನ್ನು ಹಾಕಿದಳು. ಲವ್ವಲ್ಲಿ ಬಿದ್ದ ಮೇಲೆ ಇದೆಲ್ಲ ಮಾಮೂಲಿ ಎಂದು ಅವಳಿದ್ದಾಗ ಅದ್ಯಾವುದನ್ನೂ ಮಾಡುತ್ತಿರಲಿಲ್ಲ.
ಲವ್ವಲ್ಲಿ ಬಿದ್ದ ಪ್ರತಿಯೊಬ್ಬ ಪ್ರೇಮಿಗಳೂ ಅಂದುಕೊಳ್ಳುವಂತೆ ನಾವೂ ಅಂದುಕೊಂಡಿದ್ದೆವು. ನಮ್ಮ ಪ್ರೀತಿಯೇ ಶ್ರೇಷ್ಠ. ಉಳಿದೆಲ್ಲರದೂಬೂಟಾಟಿಕೆ ಪ್ರೀತಿ. ನಮ್ಮದು ನಿಷ್ಕಲ್ಮಷ ಪ್ರೀತಿ?? ಅದೂ ಇದೂ ಏನೇನೋ ಭಾವನೆಗಳು.ಇಬ್ಬರ ಮಧ್ಯೆ ಬದಲಾದ ಗ್ರೀಟಿಂಗುಗಳು,ಗಿಫ್ಟುಗಳು,ಸಂದೇಶಗಳು,ಮಿಸ್ಡ್ ಕಾಲುಗಳು,ಕಾಲುಗಳು,ಒಣ ಜಗಳಗಳು ಅದೆಷ್ಟೋ...ಅದೆಲ್ಲ ಒಂದು ಸವಿಸವಿ ನೆನಪಿನಂತೆ ಕಣ್ಣ ಮುಂದೆ ಹಾದು ಹೋದವು.
ಆಗ ಕಾಲೇಜಿನ ಎದುರುಗಡೆ ಇದ್ದ ಕಾಕಾ ಅಂಗಡಿ ಇದ್ದ ಜಾಗದಲ್ಲಿ ಈಗ ಅಗಲವಾದ ರಸ್ತೆ ಆಗಿದೆ. ಅದೇ ಕಾಕಾ ಅಂಗಡಿಯಲ್ಲಿ ಸಾಲದ ಲೆಕ್ಕದಲ್ಲಿ ಕುಡಿದ ಗಸಿ ಸಹಿತ ಟೀಗಳಿಗೆ ಲೆಕ್ಕವೇಇಲ್ಲ. ಅಲ್ಲಿ ಟೀ ಕುಡಿಯಲು ಕಳೆದ ಸಮಯವನ್ನು ಓದುವುದರಲ್ಲಿ ಕಳೆದಿದ್ದರೆ ಇಂದು ಏನೋ ಆಗಿರುತ್ತಿತ್ತು.ಹ್ಮ್ಮ್...
ಪುಳಿಯೋಗರೆಯಂತೆ ಘಮ ಘಮ ವಾಸನೆ ಬರುತ್ತಿದ್ದ ನಮ್ಮ ಪ್ರೇಮ, ಕಾಲ ಕಳೆದಂತೆ ಹಳಸಿದ ಪುಲಾವ್ ವಾಸನೆ ಬರತೊಡಗಿತು. ತಂಗಳನ್ನು ಎಷ್ಟೇ ಬಿಸಿ ಮಾಡಿದರೂ, ಫ್ರಿಜ್ಜಿನಲ್ಲಿ ಇಟ್ಟರೂ ಆ ವಾಸನೆ ಪೂರ್ತಿಯಾಗಿ ಹೋಗುವುದಿಲ್ಲ.ಹಾಗೆಯೇ ನಮ್ಮ ಪ್ರೀತಿ ಕೂಡ ಅಡ್ಡವಾಸನೆ ಹೊಡೆಯಲು ಶುರುವಾಯಿತು.ಮೊದಮೊದಲು ಜಗಳ ಶುರುಮಾಡಿದ್ದೆ ಅವಳು. ನಾನು ಬೇಡ ಎಂದರೂ ಆ ಕಟ್ಟೆಯ ಮೇಲೆ ಕೂಡುತ್ತೀಯ, ಅಲ್ಲಿ ಕೂತುಹುಡುಗಿಯರನ್ನು ರೇಗಿಸುತ್ತೀಯ? ನನ್ನ ಮಾತಿಗೆ ಬೆಲೆ ಇಲ್ಲವ? ಅದೂ ಇದೂ ಸಣ್ಣ ಪುಟ್ಟ ವಿಷಯಗಳಿಗೆ ಹುಚ್ಚಿಯಂತೆ?? ಆಡುತ್ತಿದ್ದಳು
ನಾನೇನೆ ವಿವರಣೆ ಕೊಟ್ಟರೂ ಅವಳಿಗೆ ಸಮಾಧಾನವಾಗುತ್ತಿರಲಿಲ್ಲ. ಮುಂಚೆ ಅವಳ ಸ್ನೇಹಿತೆಯರ ಜೊತೆ ಮಾತಾಡಿದರೆ ಫ್ರೆಂಡ್ಲಿ ನೇಚರ್ ಎನ್ನುತ್ತಿದ್ದವಳು ಈಗ ಅದನ್ನೇ ಫ್ಲರ್ಟ್ ಎನ್ನಲುಶುರು ಮಾಡಿದ್ದಳು.ಮುಂಚೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತಾಡುತ್ತಿದ್ದರೆ ಇನ್ನೂ ಸ್ವಲ್ಪ ಹೊತ್ತು ಮಾತಾಡು ಎನ್ನುತ್ತಿದ್ದವಳು ಈಚೀಚೆಗೆ ಹತ್ತು ನಿಮಿಷ ಆದರೆ ಸಾಕು ಫೋನ್ ಇಡುತ್ತೇನೆಎನ್ನುತ್ತಿದ್ದಳು.
ನಮ್ಮ ಕಾಲೇಜಿನ ಪಕ್ಕದಲ್ಲಿ ಆಗಷ್ಟೇ ಹೊಸದಾಗಿ ಒಂದು ಆಸ್ಪತ್ರೆ ಶುರುವಾಗಿತ್ತು. ಕೆಲವೇ ದಿನಗಳಲ್ಲಿ ನಾನು ಒಬ್ಬ ಪೇಶಂಟ್ ಆಗಿ ಅಲ್ಲಿ ಸೇರುತ್ತೇನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಇವಳ ಹುಚ್ಚಾಟ, ತಿರಸ್ಕಾರದಿಂದ ಬೇಸತ್ತು ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಆಗ ಸ್ನೇಹಿತರೆಲ್ಲರೂ ಹೊತ್ತುಕೊಂಡು ಇದೆ ಆಸ್ಪತ್ರೆಯಲ್ಲಿ ಸೇರಿಸಿ ಟ್ರೀಟ್ಮೆಂಟ್ ಕೊಡಿಸಿದ್ದರು. ಅಪ್ಪ ಅಮ್ಮನಿಗೆವಿಷಯ ತಿಳಿಸಬೇಡಿ ಎಂದು ನಾನೇ ತಿಳಿಸಿದ್ದೆ. ಅವಳು ಒಂದು ದಿನವೂ ಆಸ್ಪತ್ರೆಗೆ ಬರಲಿಲ್ಲ.ಆಗಲೇ ತಿಳಿಯಿತು ಅವಳು ನಮ್ಮ ಪ್ರೇಮಕ್ಕೆ ಘಟಶ್ರಾದ್ಧ ಮಾಡಲು ನಿರ್ಧರಿಸಿದ್ದಾಳೆ ಎಂದು.
ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿ ಏನೆಂದರೆ ಅವಳು ಇನ್ನೊಬ್ಬನನ್ನು ಗಾಢವಾಗಿ ಪ್ರೀತಿಸುತ್ತಿದ್ದಾಳೆ ಎಂದು.ಹಾಗಾದರೆ ಅವಳು ಇಷ್ಟು ದಿವಸ ನನ್ನೊಡನೆ ಮಾಡಿದ ನಾಟಕಕ್ಕೆಪ್ರೀತಿ ಎಂಬ ಹೆಸರಿಟ್ಟಿದ್ದಳ ?? ಒಟ್ಟಿನಲ್ಲಿ ನನ್ನ ಪ್ರೇಮಕ್ಕೆ ಅಂತ್ಯ ಸಂಸ್ಕಾರ ಆಗಿತ್ತು. ಅವತ್ತೇ ಕೊನೆ...ನನ್ನ ಪ್ರೀತಿಯನ್ನು ಕೊಂದ ಕೊಲೆಗಾತಿಯನ್ನು ನಾನು ಮತ್ತೆಂದೂ ನೋಡಲಿಲ್ಲ. ಮನಸಿನಲ್ಲಿ ಇಷ್ಟೊಂದು ಹಗೆ ದ್ವೇಷ ಇದ್ದರೂ ಪ್ರತಿ ಫೆಬ್ರವರಿ 14 ಕ್ಕೆ ಕಾಲೇಜಿನ ಬಳಿ ಏಕೆಬರುತ್ತಿದ್ದೇನೆ?
ಏಕೆಂದರೆ ನಮ್ಮ ಪ್ರೇಮ ಶುರುವಾದ ನಂತರ ಬಂದ ಫೆಬ್ರವರಿ 14ಕ್ಕೆ ಅವಳು ಮೊಟ್ಟ ಮೊದಲ ಬಾರಿಗೆ ನನಗೆ ಚುಂಬಿಸಿದ್ದಳು.ಅವಳ ನೆನಪುಗಳು ಮಾಸಿದ್ದರೂ ಅವಳ ಬೆಚ್ಚನೆಯ ಉಸಿರು...ನನ್ನ ಅಧರದ ಮೇಲೆ ಇನ್ನೂ ಹೊಗೆಯಾಡುತ್ತಿರುವ ಆ ಚುಂಬನದ ಬಿಸಿ ಮಾತ್ರ ಇಂದಿಗೂ ಹಾಗೆ ಇದೆ. ಅದೇ ನನ್ನನ್ನೂ ಇಂದಿಗೂ ಜೀವಂತವಾಗಿ ಇಟ್ಟಿರುವುದು. ಆದರೆ ಮತ್ತೆಂದೂ ಸಾಯುವ ಪ್ರಯತ್ನ ಮಾಡಲಿಲ್ಲ. ಅವಳಿಗಾಗಿ ನನ್ನನ್ನೇ ನಂಬಿಕೊಂಡಿರುವ ಅಪ್ಪ ಅಮ್ಮನಿಗೆ ನಾನೇಕೆ ದ್ರೋಹಮಾಡಬೇಕು? ಅವರ ಕಣ್ಣೆದುರಿಗೆ ನಾನಿದ್ದು...ನನ್ನ ಕಷ್ಟ ನೋಡಿ ಅವರು ನೋವು ಪಡುವುದು ಬೇಡ ಎಂದುಕೊಂಡು..ದೂರದ ಊರಿನಲ್ಲಿ....ಅದೇ ನನ್ನ ಪ್ರೀತಿಯಜನನಮರಣವಾದ ಊರಿನಲ್ಲೇ...
ಪ್ರತಿಕ್ರಿಯೆ (1)