ನಿನ್ನೆಯಷ್ಟೇ ಚೇತನ್ ಭಗತ್ ಅವರ ಹೊಸ ಕಾದಂಬರಿ "೨ ಸ್ಟೇಟ್ಸ್" ಓದಿ ಮುಗಿಸಿದೆ. ಪುನ್ಜಾಬಿ ಹುಡುಗ ಮದ್ರಾಸಿ ಹುಡುಗೀನ ಮದ್ವೆ ಆಗೋ ಅಂತಹ, ಅವರ ಜೀವನದ್ದೇ ಕಥೆ. ತುಂಬಾ ಚೆನ್ನಾಗಿ ಬರ್ದಿದಾರೆ. ಅವರ "sense of humour" ಅಂತೂ ಮೆಚ್ಬೇಕಾದ್ದು. IIM-A ನಲ್ಲಿ ಅವರ ಜೊತೆ ಓದುವಂಥ ಹುಡುಗಿಯ ಜೊತೆಗೆ ಪ್ರೀತಿ-ಪ್ರೇಮ, ಆದ್ರೆ ಪಕ್ಕಾ ಪಂಜಾಬಿ ಮನಸ್ಥಿತಿಯ ತನ್ನ ಅಮ್ಮ- ಸಂಬಂಧಿಕರು ಮತ್ತು orthodox iyer ಮನೆತನದ ಹುಡುಗಿಯ ತಂದೆ-ತಾಯಿ, ಇವರುಗಳ ಹೊಂದಾಣಿಕೆಯ ವಿಷಯದ ಜಟಾಪಟಿ ಇಂತಹ ಪ್ರಸಂಗಗಳಲ್ಲಿಯೂ ಓದುಗನನ್ನು ನಗಿಸುವಂಥ ಬರೆವಣಿಗೆ. ಒಟ್ಟಾರೆ ಹೇಳೋದಾದ್ರೆ ಆರಾಮಾಗಿ ಕೂತು ಒಂದೇ ದಿನದಲ್ಲಿ ಓದಿ  ನಲಿಯಬಹುದಾದಂಥ ಒಳ್ಳೆ ಪುಸ್ತಕ.