ಅತಿ ಚಟುವಟಿಕೆಯ ತೊಂದರೆ :(Attention-Deficit Hyperactivity Disorder) : ಇರುವ ಮಕ್ಕಳಲ್ಲಿ ತಂಬಾಕು ಬಳಕೆಯ ಅಪಾಯ ಹೆಚ್ಚು ಕಾಣಬಹುದು, ಏಕೆಂದರೆ ಇವರಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸ್ವಭಾವ (impulsivity) ಮತ್ತು ಸ್ವಯಂ ನಿಯಂತ್ರಣದ ಸವಾಲು ಹೆಚ್ಚಿರುತ್ತದೆ. ನಿಕೋಟಿನ್ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸಿ ತಾತ್ಕಾಲಿಕವಾಗಿ ಗಮನ ಮತ್ತು ಸಮಾಧಾನ ಹೆಚ್ಚಿಸುವಂತೆ ಮಾಡುತ್ತದೆ. ಆದ್ದರಿಂದ ಹದಿಹರೆಯವರಲ್ಲಿ ತಂಬಾಕು ಮೆದುಳನ್ನು ಕೂಲ್ ಮಾಡುತ್ತದೆ ಎಂಬ ತಪ್ಪು ಭಾವನೆ ಮೂಡಿ ನಿರಂತರವಾಗಿ ಬಳಸುವ ಸಾಧ್ಯತೆ ಇದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ವಯಂ ಚಿಕಿತ್ಸೆ ಕಲ್ಪನೆ (self-medication hypothesis) ಎಂದು ಕರೆಯುತ್ತಾರೆ.

ಕೌಟುಂಬಿಕ ಕಲಹ ಹಾಗೂ ನಿರಂತರ ಜಗಳಗಳು: ದೈಹಿಕ ಅಥವಾ ಮಾನಸಿಕ ಹಿಂಸೆ ನಡೆಯುವ ವಾತಾವರಣದಲ್ಲಿ ಬೆಳೆವ ಮಕ್ಕಳು ಹಾಗೂ ಯುವಕರು ತೀವ್ರ ಒತ್ತಡ, ಭಯ ಮತ್ತು ಅಸುರಕ್ಷಿತ ಭಾವನೆಗಳನ್ನು ಅನುಭವಿಸುತ್ತಿರುತ್ತಾರೆ. ಇದು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇಂತಹ ನೋವು ಮತ್ತು ಆತಂಕದಿಂದ ತಾತ್ಕಾಲಿಕವಾಗಿ ಹೊರಬರಲು ಕೆಲವರು ತಂಬಾಕಿನಂತಹ ಅಪಾಯಕಾರಿ ಚಟುವಟಿಕೆಗಳತ್ತ ಆಕರ್ಷಿತರಾಗಬಹುದು.

ಹದಿಹರೆಯದ ವಿದ್ಯಾರ್ಥಿಗಳು ತಂಬಾಕು ರಹಿತ ಜೀವನ ನಡೆಸಲು ಸುಲಭ ಪರಿಹಾರಗಳು : 1.ಸ್ನೇಹಿತರ ಒತ್ತಡ ಬಂದಾಗ ಆತ್ಮವಿಶ್ವಾಸದಿಂದ “ಬೇಡ” ಎಂದು ಹೇಳುವ ಅಭ್ಯಾಸ ಮಾಡಿಕೊಳ್ಳಿ. ಅವರು ನಿಮ್ಮನ್ನು ಸಭ್ಯ ಎಂದು ಪ್ರಚೋದಿಸಬಹುದು, ಗಂಡಸ್ತನ ಬೇಕಿದಕ್ಕೆ ಎಂದು ಹೇಳಬಹುದು, ನೆನಪಿರಲಿ ದೇಹ ಮತ್ತು ಮನಸ್ಸಿಗೆ ಒಳಿತಲ್ಲದ ವಸ್ತುವನ್ನು ಸೇವಿಸಲು ಪ್ರಚೋದಿಸುವ ಸ್ನೇಹಿತರು ಸ್ನೇಹಿತರೇ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡು ತಂಬಾಕು ಬಳಸದ ಉತ್ತಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.

2. ಕ್ರೀಡೆ ಮತ್ತು ವ್ಯಾಯಾಮದಲ್ಲಿ ನಿರಂತರ ತೊಡಗಿರಿ – ಇದು ಹದಿಹರೆಯದಲ್ಲಿ ಉಂಟಾಗುವ ಸಾಮಾನ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಎಂಡಾರ್ಫಿನ್‌ಗಳು ಮುಖ್ಯವಾಗಿ ಮೆದುಳು ಮತ್ತು ಮೆದುಳುರಜ್ಜುವಿನಲ್ಲಿ (spinal cord) ಉತ್ಪತ್ತಿಯಾಗುವ ನರಸಂದೇಶಕ ರಾಸಾಯನಿಕಗಳಾಗಿವೆ. ಇವು ಸ್ವಾಭಾವಿಕವಾಗಿ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ಜೊತೆಗೆ ಮನಸ್ಸಿಗೆ ಸಂತೋಷ ಮತ್ತು ಉಲ್ಲಾಸದ ಅನುಭವವನ್ನು ಉಂಟುಮಾಡುತ್ತವೆ. 

3. ಸಂಗೀತ, ಚಿತ್ರಕಲೆ, ಓದು, ಬರವಣಿಗೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಧ್ಯಾನ, ಆಳವಾದ ಉಸಿರಾಟ, ಯೋಗ ಮುಂತಾದ ಒತ್ತಡ ನಿರ್ವಹಣಾ ವಿಧಾನಗಳನ್ನು ಅನುಸರಿಸಿ.

4. ತಂಬಾಕು ಬಳಸುವ ಸ್ಥಳಗಳು, ಹಾಗೂ ಸ್ನೇಹಿತರಿಂದ ದೂರವಿರಿ ಪೋಷಕರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ಹಿರಿಯರೊಂದಿಗೆ ಮಾತನಾಡಿ. ಅಗತ್ಯವಿದ್ದರೆ ಮನೋವೈದ್ಯಕೀಯ ಸಲಹೆ ಪಡೆಯಿರಿ.

5. ಶಾಲೆಯ ತಂಬಾಕು ವಿರೋಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮ್ಮ ಭವಿಷ್ಯದ ಗುರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿ. ಆರೋಗ್ಯದಲ್ಲಿ ಆಗುವ ಉತ್ತಮ ಬದಲಾವಣೆಗಳನ್ನು ಗಮನಿಸಿ. ತಂಬಾಕಿನ ಆಸೆ ಬಂದಾಗ ಒಳ್ಳೆಯ ಆಹಾರ ಅಥವಾ ನೀರು ಸೇವಿಸುವಂತಹ ಪರ್ಯಾಯ ಕ್ರಮಗಳನ್ನು ಅನುಸರಿಸಿ.

6. ಸೆಳೆತವನ್ನು ಸ್ವಯಂ ನಿಯಂತ್ರಿಸಲು 4D ತಂತ್ರವನ್ನು ಉಪಯೋಗಿಸಿ : Delay : ತಿನ್ನುವ ಇಚ್ಛೆಯನ್ನು 30 ರಿಂದ 60 ನಿಮಿಷ ಮುಂದಕ್ಕೆ ಹಾಕಿ ಹೀಗೆ ಮಾಡಿದಾಗ ತಂಬಾಕು ಸೇವಿಸಬೇಕೆನ್ನುವ ತವಕದ ತೀವ್ರತೆ ಒಂದು ಹಂತ ಮುಟ್ಟಿದ ಮೇಲೆ ನಿಯಂತ್ರಣಕ್ಕೆ ಬರುತ್ತದೆ.

Displace : ಸ್ನೇಹಿತರ ವರ್ಗವು ಅಥವಾ ನಿರಂತರವಾಗಿ ಭೇಟಿ ನೀಡುವ ಅಂಗಡಿಯಿಂದನು ನಿಮಗೆ ಪ್ರಚೋದನೆ ಸಿಗುತ್ತಿದ್ದರೆ ಅಲ್ಲಿಂದ ತಕ್ಷಣ ಹೊರಟುಬಿಡಿ.

Discuss : ತಂಬಾಕಿನ ಸೆಳೆತ ಹೆಚ್ಚಾದಲ್ಲಿ ನೀವು ನಂಬುವ ವ್ಯಕ್ತಿಗಳೊಂದಿಗೆ ಮುಕ್ತವಾಗಿ ನಿಮ್ಮ ಅಭ್ಯಾಸ ಕುರಿತು ಚರ್ಚಿಸಿ ಹಾಗೂ ಈ ಕ್ಷಣ ನಿಮ್ಮಲ್ಲಾಗುತ್ತಿರುವ ಬದಲಾವಣೆಗಳನ್ನು ಹೇಳಿಕೊಳ್ಳಿ. ಇದರಿಂದ ಒತ್ತಡ ಕಮ್ಮಿಯಾಗಿ ತಂಬಾಕಿನ ಸೆಳೆತ ನಿಯಂತ್ರಣಕ್ಕೆ ಬರುತ್ತದೆ.

Deep Breath : ತಂಬಾಕಿನ ಸೆಳೆತ ಉಂಟಾಗುವ ಸಮಯದಲ್ಲಿ ಹಿಂದೆ ಗೆದ್ದ ಚಿಹ್ನೆಯಿಂದ ದೇಹ ಮತ್ತು ಮನಸ್ಸಿನಲ್ಲಿ ಕಿರಿ ಕಿರಿ ಉಂಟಾಗಬಹುದು. ಇದನ್ನು ನಿಯಂತ್ರಿಸಲು ಉಸಿರಾಟದ ವ್ಯಾಯಾಮ ತುಂಬಾ ಸಹಾಯಕಾರಿ

▪️ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಪ್ರೋತ್ಸಾಹಿಸುವ ವಿಷಯಗಳಿಂದ ದೂರವಿರಿ.

▪️ಸಾಕಷ್ಟು ನಿದ್ರೆ ಪಡೆಯಿರಿ – ಇದು ಆತ್ಮನಿಯಂತ್ರಣ ಹೆಚ್ಚಿಸುತ್ತದೆ.

▪️ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಿಕೊಳ್ಳಿ

▪️ನೀವು ತಂಬಾಕು ಸೇವನೆ ಬಿಡದು ನಿರ್ಧರಿಸಿದ ವಿಷಯವನ್ನು ನಿಮ್ಮ ಆಪ್ತರೊಂದಿಗೆ ಹೇಳಿಕೊಳ್ಳಿ.

▪️ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಕಾನೂನುಬಾಹಿರ ಎಂಬುದನ್ನು ತಿಳಿದುಕೊಳ್ಳಿ.

▪️ತಂಬಾಕು ರಹಿತ ಜೀವನಕ್ಕೆ ಇತರರಿಗೆ ಮಾದರಿಯಾಗಿರಿ.

ತಂಬಾಕು ಬಳಕೆ (ಸಿಗರೇಟ್ ಸೇದುವುದು, ಬೀಡಿ, ಗುಟ್ಕಾ, ಜರ್ದಾ, ಖೈನಿ, ಸ್ನಫ್ ಮುಂತಾದವು) ದೇಹದ ಹಲವಾರು ಅಂಗಗಳಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ. World Health Organization (WHO) ಮತ್ತು Centers for Disease Control and Prevention (CDC) ವರದಿಗಳ ಪ್ರಕಾರ ತಂಬಾಕು ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಹಾನಿ ಉಂಟುಮಾಡುತ್ತದೆ.

ತಂಬಾಕು ಬಳಕೆಯಿಂದ ಉಂಟಾಗುವ ಕ್ಯಾನ್ಸರ್ ವಿಧಗಳ ಕುರಿತು ತಿಳಿದಿರಲಿ.

1. ಶ್ವಾಸಕೋಶ ಕ್ಯಾನ್ಸರ್ (Lung Cancer)

2. ಬಾಯಿ ಕ್ಯಾನ್ಸರ್ (Oral Cancer), ತುಟಿ, ನಾಲಿಗೆ, ವಸಡು(gums), ಒಳಗಲ್ಲ

3. ಗಂಟಲು ಕ್ಯಾನ್ಸರ್ (Throat / Pharyngeal Cancer)

4. ಧ್ವನಿಪೆಟ್ಟಿಗೆ ಕ್ಯಾನ್ಸರ್ (Laryngeal Cancer)

5. ಅನ್ನನಾಳ ಕ್ಯಾನ್ಸರ್ (Esophageal Cancer) ಗಂಟಲಿನಿಂದ ಹೊಟ್ಟೆಗೆ ಆಹಾರ ಸಾಗಿಸುವ ನಾಳದಲ್ಲಿ ಉಂಟಾಗುವ ಕ್ಯಾನ್ಸರ್.

6. ಹೊಟ್ಟೆ ಕ್ಯಾನ್ಸರ್ (Stomach Cancer)

7. ಮೇದೋಜೀರಕ ಗ್ರಂಥಿ ಕ್ಯಾನ್ಸರ್ (Pancreatic Cancer)

8. ಯಕೃತ್ತಿನ ಕ್ಯಾನ್ಸರ್ (Liver Cancer)

9. ಮೂತ್ರಪಿಂಡ ಕ್ಯಾನ್ಸರ್ (Kidney Cancer)

10. ಮೂತ್ರಾಶಯ ಕ್ಯಾನ್ಸರ್ (Bladder Cancer)

11. ಗರ್ಭಾಶಯದ ಮುಖದ ಕ್ಯಾನ್ಸರ್ (Cervical Cancer)

12. ಕೊಲನ್ ಮತ್ತು ರೆಕ್ಟಮ್ ಕ್ಯಾನ್ಸರ್ (Colorectal Cancer) ಇತ್ಯಾದಿ.

“ಕೂಲ್ ಲಿಪ್” ಎಂಬುದು ಹೊರಗೆ ಸ್ಟೈಲಾಗಿ, ಹಾನಿಯಿಲ್ಲದಂತೆ ಕಾಣಬಹುದು. ಆದರೆ ಅದರ ಒಳಗೆ ಇರುವ ನಿಕೋಟಿನ್ ಮೆದುಳಿನ ಆನಂದದ ಕೇಂದ್ರ ವ್ಯವಸ್ಥೆಯನ್ನು ಬದಲಿಸಿ, ನಿಧಾನವಾಗಿ ವ್ಯಸನಕ್ಕೆ ಕಾರಣವಾಗುತ್ತದೆ.

ಹದಿಹರೆಯದವರ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಈ ವಯಸ್ಸಿನಲ್ಲಿ ನಿಕೋಟಿನ್ ಬಳಕೆ ಹೆಚ್ಚು ಅಪಾಯಕಾರಿ. ತಾತ್ಕಾಲಿಕ ಸಂತೋಷಕ್ಕಾಗಿ ಪ್ರಾರಂಭಿಸಿದ ತಂಬಾಕು ಒಂದು ದಿನ ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ಜೀವಂತವಾಗಿ ಸುಡುವ ಬಂದೂಕಾಗಬಹುದು! ಬದುಕೊ? ಬಂದೂಕೋ? ಆಯ್ಕೆ ನಿಮ್ಮದು.

-ಗಿರೀಶ್ ಎಂ ಎನ್, ಕೌನ್ಸೆಲಿಂಗ್ ಮನಶಾಸ್ತ್ರಜ್ಞರು, ಉಡುಪಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ