ಗಡಿಯಾರದಂತೆ ನಾವಿರಬೇಕಂತೆ. ಅದಕ್ಕೆ ಪ್ರಿಯ-ಅಪ್ರಿಯ, ಒಳಿತು-ಕೆಡುಕು ಏನಾದರು ಇದೆಯೇ? ಇಲ್ಲ. ಯಾರು ಬಂದರೂ ಸಮಯವನ್ನು ತೋರಿಸುವುದು ಮಾತ್ರ ಅದರ ಕೆಲಸ. ಮಾಹಿತಿ ಕೇಳಿದವಗೆ ಗೊತ್ತಿದ್ದರೆ ಹೇಳೋಣ. ತಿಳಿದಿಲ್ಲವೇ 'ಗೊತ್ತಿಲ್ಲ' ಎಂದರಾಯಿತು. ಗಡಿಯಾರ ಜಡವಸ್ತುವೇನೋ ಸರಿ. ಜಡವಸ್ತುವನ್ನು ಬೇಕಾದಂತೆ ಕ್ರಿಯೆಗೊಳಿಸಿ, ಅದರಿಂದ ಪ್ರತಿಕ್ರಿಯೆ, ಪ್ರತಿಧ್ವನಿ, ಪ್ರತಿಫಲನ, ಚಲನೆ ಇತ್ಯಾದಿ ಸಾಮರ್ಥ್ಯಗಳನ್ನು ಕಂಡು ಹಿಡಿದ ಮಾನವನ ಬುದ್ಧಿವಂತಿಕೆ ಸಾಮಾನ್ಯವಾದುದಲ್ಲ. ನಮ್ಮ ಯೋಚನೆ, ಕೃತಿ, ಮಾತು, ಯೋಜನೆಗಳನ್ನು ಸಾಕಾರಗೊಳಿಸುವುದು ನಮ್ಮ ಕೈಯಲ್ಲೇ ಇದೆ, ಮನಸ್ಸು ಬೇಕು. ಆದರೆ ನಮ್ಮ ಮನವೆಂಬ ಮರ್ಕಟ ಆಚೀಚೆ ಹರಿದಾಡಿ ಕೆಡುವುದುಂಟು. ಜಡವಸ್ತುವಿನ ತಪ್ಪಲ್ಲ, ನಮ್ಮ ಅಂತರಂಗದ ಹರಿದಾಡುವ ಮನಸ್ಸಿನ ತಪ್ಪು.ಏಕಾಗ್ರತೆ, ಸ್ಥಿತಪ್ರಜ್ಞತೆ ಮುಖ್ಯ.ಚಂಚಲ ಮನಸ್ಸಿಗೆ ಕಡಿವಾಣ ಹಾಕಿದರೆ ಎಲ್ಲವೂ ನಿರ್ವಿಘ್ನ.
'ಮನಸ್ಸೇಕಂ ವಚಸ್ಸೇಕಂ ಕರ್ಮಣ್ಯೇಕಂ ಮಹಾತ್ಮನಾಂ' ಇದು ಜ್ಞಾನಿಗಳ ಲಕ್ಷಣ .ಇದರಲ್ಲಿ ವ್ಯತ್ಯಾಸವಾದಲ್ಲಿ,ಸಾಮರಸ್ಯವಿಲ್ಲದಲ್ಲಿ ದುಷ್ಟರ ಪಟ್ಟ,ಕೆಲಸ ಕೆಡುತ್ತದೆ. ಮಾನವ ಜೀವಿಗಳಾದ ನಾವು ಜಡಹಿಡಿದವರಂತಿರದೆ ಯಾಕೆ ಉತ್ತಮ ರೀತಿಯಿಂದ ಸ್ಪಂದನ ನೀಡಬಾರದು?ಯೋಚಿಸಿ ಮುಂದಡಿಯಿಡೋಣ.
ವಿಶ್ವ ವಿಶೇಷ ಚೇತನರ ದಿನ
ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವ, ಪ್ರೋತ್ಸಾಹಿಸುವ ದೃಷ್ಟಿಯಿಂದ ದಶಂಬರ ೩ ನೇ ತಾರೀಕಿನಂದು 'ಅಂತರರಾಷ್ಟ್ರೀಯ ವಿಶೇಷ ಚೇತನರ ದಿನ'ವೆಂದು ವಿಶ್ವಸಂಸ್ಥೆಯು ಘೋಷಿಸಿತು. ಹತ್ತು ಹಲವು ಕಾರ್ಯಕ್ರಮಗಳನ್ನು, ಅವರಿಗಿರುವ ಸೌಲಭ್ಯ,ಕ್ರೀಡೆ, ಶಿಕ್ಷಣ, ಉದ್ಯೋಗ ಕ್ಷೇತ್ರ, ಮೀಸಲಾತಿಯ, ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಸಂಘಸಂಸ್ಥೆಗಳು, ಸರಕಾರದ ಇಲಾಖೆಗಳು, ಶಾಲೆಗಳು ಇಂದು ಹಮ್ಮಿಕೊಳ್ಳುವುದಿದೆ. ಅವರು ಎಲ್ಲರಂತೆ ಬದುಕುವುದು ಮುಖ್ಯ, ಕೀಳರಿಮೆ ಬರದಂತೆ ಹಿತ ಕಾಪಾಡುವುದು. ವಿಶ್ವಸಂಸ್ಥೆಯ ಈ ಯೋಚನೆ-ಯೋಜನೆಗೆ ಎಲ್ಲರೂ ಕೈಜೋಡಿಸೋಣ.
ಸಂಗ್ರಹ: ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!