ಆಡು ಮುಟ್ಟದ ಸೊಪ್ಪಿಲ್ಲ, ಆಲೂರು ವೆಂಕಟರಾಯರು ಮಾಡದ ಕೆಲಸವಿಲ್ಲ, 'ಹಿರಿಯ ಕವಿವರೇಣ್ಯರಾದ ದ.ರಾ.ಬೇಂದ್ರೆಯವರ ನುಡಿ. ಹೌದಲ್ವ? ಕರ್ನಾಟಕ, ಕನ್ನಡ ಭಾಷೆ, ಕನ್ನಡಮ್ಮ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿರಬೇಕು. ಕನ್ನಡಿಗರ ಕಾರ್ಯದಕ್ಷತೆ ಅಮೋಘವಾದದ್ದು.
ಕರ್ನಾಟಕ ಸಂಸ್ಕೃತಿ ವಿಶ್ವ ವ್ಯಾಪಿ. ಕಡಲ ತೀರದ ಭಾರ್ಗವರಾದ ಹಿರಿಯ ಸಾಹಿತಿಯವರಾದ ಡಾ ಶಿವರಾಮ ಕಾರಂತರು ಯಕ್ಷಗಾನದ ಪ್ರಕಾರವನ್ನೂ ವಿದೇಶದ ನೆಲದಲ್ಲಿ ಪ್ರದರ್ಶಿಸಿ ವಿಜೃಂಭಿಸಿದವರು. ಇತ್ತೀಚೆಗೆ ವಿದೇಶದಲ್ಲಿ ಯಕ್ಷಗಾನ ಕಲಿಸುವ, ಪ್ರದರ್ಶಿಸುವ ಕಾರ್ಯಕ್ರಮ ಅಲ್ಲಲ್ಲಿ ಹಮ್ಮಿಕೊಳ್ಳುವುದನ್ನು ಮಾಧ್ಯಮಗಳಲ್ಲಿ ಓದುತ್ತಿದ್ದೇವೆ. ಭರತ ಖಂಡದ ಸರ್ವ ಸಂಸ್ಕೃತಿಯ ಬಿಳಲುಗಳು ವಿಶ್ವ ವ್ಯಾಪಿಯಾಗಿದೆ. ವಿ.ಸೀತಾರಾಮಯ್ಯನವರ ಈ ಕೆಳಗಿನ ಕವನದ ತುಣುಕನ್ನು ಆಸ್ವಾದಿಸೋಣ.
ಮಾನವನೆತ್ತರ ಆಗಸ ದೇರಿಗೆ
ಏರುವವರೆಗೂ ಬೆಳೆದೇವು
ಮಾನವ ಹೃದಯಕೆ ವಿಶ್ವ ವಿಶಾಲತೆ
ಹಾಯುವವರೆಗೂ ಹಾದೇವು
ಕವಿಯ ಬರವಣಿಗೆ ಮನಸ್ಸಿನ ಯೋಚನೆ ಹೃದಯದಲಿ ಹುಟ್ಟಿ, ಇತರರ ಹೃದಯಕ್ಕೆ ತಲುಪಿದಾಗ ಸಾರ್ಥಕ್ಯ. ಇದು ಕನ್ನಡ ಭಾಷೆಯ ಜಾಣ್ಮೆ.ಆಗಬೇಕು ಸಹ.
ನಾಲಿಗೆಗೆ ನಿಲುಕದಾ ನುಡಿಗಳುಂಟು
ನುಡಿಗಳಿಗೆ ನಿಲುಕದಾ ಭಾವವುಂಟು
ಯಾವುದೇ ದೇಶದ ಬೆನ್ನೆಲುಬು ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಹಬ್ಬಿರುವುದು. ದೇಶವೆಂಬುದು ದೊಡ್ಡ ಆಲದಮರ. ಬಿಳಲುಗಳು ನಾಡು, ಹಳ್ಳಿಗಳು. ಸಂಸ್ಕೃತಿಯ ಮಿಡಿತ ದೇಶದ ಒಳನಾಡು ಪ್ರದೇಶಗಳಲ್ಲಿಯ ಆಚಾರ-ವಿಚಾರ, ಬರವಣಿಗೆಯಲ್ಲಡಗಿದೆ.
ವಿ.ಕೃ ಗೋಕಾಕರ ಸಾಲುಗಳು
'ತಾರೆಗಳ ಮೇಳವಿಸಿ ಬಂದು ಬಿಟ್ಟಿಹ ಬೀಡು
ನಮ್ಮ ಕನ್ನಡ ನಾಡು ಕಿರಿಯರ ಅಭಿವೃದ್ಧಿಯತ್ತ ಗಮನಹರಿಸುವ ಕೆಲಸವಾಗಬೇಕು. ಇನ್ನಷ್ಟು ಗಟ್ಟಿಗೊಳಿಸಲು ಎಲ್ಲರೊಂದಾಗೋಣ.
*-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!