ಆಕಾಶದಲ್ಲಿ ಕಾಣಿಸಿಕೊಳ್ಳುವ ಕರಿಮೋಡಗಳು ನೀರಿನ ಮುತ್ತಿನ ಹನಿಗಳಾಗಿ ಈ ಭೂಮಿ ಮೇಲೆ ಬೀಳುವುದಷ್ಟೆ. ಕರಿಮೋಡ ಕ್ಷಣಮಾತ್ರ. ಅದೇ ರೀತಿ ಹಣದ ಸ್ಥಿತಿ ಸಹ. 'ಬರಬಹುದು, ಹೋಗಬಹುದು'. ಎಷ್ಟೇ ಶ್ರೀಮಂತನೂ ಸಹ ಹಣೆಬರಹ ಸರಿಯಿಲ್ಲದಿದ್ದರೆ ಬಡವನಾಗಬಹುದು. ಏನೇ ಆದರೂ ಬೆದರದೆ, ಬೆಚ್ಚದೆ ಕಾರ್ಯಕ್ಷಮತೆಯಿಂದ, ಜಾಣ್ಮೆಯಿಂದ ಬುದ್ಧಿ ಉಪಯೋಗಿಸಿ ಕಾಲಕ್ಕೆ ತಕ್ಕಂತೆ, ವರ್ತಮಾನಕ್ಕೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿಯಬೇಕು. ಕಷ್ಟ ಬಂತೆಂದು 'ಆಕಾಶವೇ ತಲೆಮೇಲೆ ಬಿದ್ದಂತೆ' ಚಿಂತಿಸದೆ, ಕಷ್ಟದಿಂದ ಹೊರಗೆ ಹೇಗೆ ಬರುವುದೆಂದು ಯೋಚಿಸಬೇಕು. ಶೋಕವೆನ್ನುವುದು ಒಂದು ಮಾಯೆ. ಅದು ನಮ್ಮನ್ನು ಮುತ್ತಿದರೆ, ಆವರಿಸಿಕೊಂಡರೆ ಹೊರಗೆ ಬರುವುದು ಕಷ್ಟ. ಶೋಕ ಕ್ಷಣಿಕವಿರಬೇಕು. ಅದರಲ್ಲೇ ಮುಳುಗಿರಬಾರದು. ಶೋಕ ಕೃಶಕ್ಕೆ ಕಾರಣವಾಗಬಹುದು. ಧೈರ್ಯವನ್ನು ನುಂಗಿ ಹಾಕುವ ಸಾಮರ್ಥ್ಯ ಶೋಕಕ್ಕಿದೆ. ಅದೊಂದು ರೀತಿಯ ಶತ್ರು. ಹತ್ತಿರ ಬರಲೂ ಬಿಡಬಾರದು' ಬೆಂಕಿಯನ್ನು ಕೆಳಮುಖವಾಗಿ ಹಿಡಿದರೂ ಅದರ ಜ್ವಾಲೆ ಮೇಲ್ಮುಖವಾಗಿಯೇ ಇರುವುದು 'ಅದು ತನ್ನ ಸ್ಥಾನ ಬಿಟ್ಟುಕೊಡದು. ಹಾಗೆ ಇರಲು ನಾವು ಕಲಿಯೋಣ.
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!