ಶ್ರಮಿಕ ವರ್ಗವನು ನೆನೆಯುತಲಿ ಕೃತಜ್ಞತೆಯನು ಹೃತ್ಪೂರ್ವಕ ಅರ್ಪಿಸು ಮನವೇ...
ಕಾರ್ಮಿಕ ದಿನಾಚರಣೆಯೆಂದು ವರುಷದ ಒಂದು ದಿನ ಉಪಕಾರ ಸ್ಮರಣೆ ಮಾಡಿದರೆ ಸಾಲದು. ತಮ್ಮೊಂದಿಗೆ ಇತರರ ಶ್ರೇಯಸ್ಸಿನಲ್ಲಿಯೇ ಬದುಕಿಗಾಗಿ ಹೋರಾಟ ನಡೆಸುವವರ ಬಗ್ಗೆ ಸದಾ ಕಾಳಜಿಯಿರಬೇಕು. ಶ್ರಮಿಕರ ಬೆವರಿನ ಬೆಲೆಯ ಅರಿವಿರಬೇಕು. ನ್ಯಾಯವಾಗಿ ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಕಾರ್ಯಾಗಾರಗಳನ್ನು, ಅಭಿನಂದನೆಗಳನ್ನು ಹಕ್ಕು ಮತ್ತು ಕರ್ತವ್ಯಗಳನ್ನು, ಆರೋಗ್ಯ ತಪಾಸಣೆ, ಉಚಿತ ಸಲಹೆಗಳನ್ನು, ಸಾಲ ಸೌಲಭ್ಯ, ಸಂಘಟಿತರಾಗಿರಬೇಕೆಂಬ ಕರೆಯನ್ನು ಈ ದಿನ ಸಂಘ ಸಂಸ್ಥೆಗಳ ಮೂಲಕ, ಅವರದ್ದೇ ಆದ ಕಾರ್ಮಿಕ ಕಲ್ಯಾಣ ಇಲಾಖೆಯ ಅಡಿಯಲ್ಲಿ ಹಮ್ಮಿಕೊಳ್ಳುವರು. ಅವಘಡಗಳು ಸಂಭವಿಸಿದಾಗ ತಕ್ಕ ಚಿಕಿತ್ಸೆಯನ್ನು ನೀಡುವುದು, ಅವರನ್ನೇ ನಂಬಿರುವ ಕುಟುಂಬ ಸದಸ್ಯರ ಜೀವನದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ರಕ್ಷಣೆಗಾಗಿ ಕಾರ್ಯಗಾರಗಳು, ಮಾಹಿತಿಯನ್ನು ನೀಡಿ, ಭವಿಷ್ಯದ ಬಗ್ಗೆ ತಿಳಿಯಪಡಿಸಬೇಕು. ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನದ ಸೌಲಭ್ಯವಿದ್ದು, ಅದನ್ನು ಸಂಬಂಧಿಸಿದ ಅಧಿಕಾರಿಗಳು ಇಲಾಖೆಯ ಮೂಲಕ ಕಾಲಕಾಲಕ್ಕೆ ಮಾಡಿಸುವರು. ಪ್ರತಿಯೊಂದರ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು. ನಮ್ಮೆಲ್ಲರ ಏಳಿಗೆಗಾಗಿ ಶ್ರಮಿಸುತ್ತಿರುವ ಎಲ್ಲಾ ಕಾರ್ಮಿಕ ಬಂಧುಗಳಿಗೆ ಶುಭಾಶಯ ಕೋರುತ್ತಾ ನೆನಪಿಸಿಕೊಳ್ಳೋಣ.
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!