ಪುನೀತ ನಿನ್ನ ಹೆಸರೇ ಅಪ್ಯಾಯಮಾನ

ನೀನೋರ್ವ ದೇವನಿತ್ತ ವರ

ಪಾರ್ವತಮ್ಮ ರಾಜಕುಮಾರರ ಸುಕುಮಾರ

ಭರತ ಖಂಡಕೆ ದೊರೆತ ವರ 


ಬಡವರ ಪಾಲಿನ ಆಶಾಕಿರಣ

ಬಾರದಾಯಿತೆ ಮೇಲೆ ಕುಳಿತವಗೆ ಕರುಣ

ಕಿರಿ ವಯಸ್ಸಿನ ಹಿರಿಯ ಸಾಧಕ ತರುಣ

ತಡೆಗೋಡೆಯಿಲ್ಲದೆ ಸಾಗಿದ   ಸಮಾಜದ ಧುರೀಣ


ಕನ್ನಡದ ಕಂದ ಸಕಲರಿಗೂ ನೆರವಾದೆ

ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿದೆ

ವೃದ್ಧರ ಕೈಹಿಡಿದೆತ್ತಿ ಸಲಹಿದೆ

ಮನಗೆದ್ದ ಕರುನಾಡ ಕಣ್ಮಣಿಯಾದೆ


ಸಿನಿಲೋಕದ ಮುತ್ತು ಮಾಣಿಕ್ಯವೇ

ಕೋಟಿ ಕೋಟಿ ಅಭಿಮಾನಿಗಳ ಗೆದ್ದವನೇ

ಮುತ್ತುರಾಜರ ಆದರ್ಶಕೆ ಸಾಕ್ಷಿಯಾದವನೇ

ಕನ್ನಡಾಂಬೆಯ ಮಣ್ಣಿನ ಘಮಲ ಹಬ್ಬಿಸಿದವನೇ


ಅಂಧರ ಪಾಲಿನ ಬೆಳಕಾದೆ

ಸಾವಿನಲ್ಲೂ ಸಾರ್ಥಕತೆ ಮೆರೆದೆ

ಅಂಗ ಅಂಗವನೂ ಹೊನ್ನಾಗಿಸಿ ಜಯಿಸಿದೆ

ನಿನ್ನ ನೆನಪು ಸದಾ ಮನದಲಿದೆ


-ರತ್ನಾ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ