( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
- ಅಮ್ಮ . ನಾನೂ ಈಜುತ್ತೀನಿ
- ಬೇಡ ಮಗೂ , ಅಲ್ಲಿ ತುಂಬಾ ಆಳ
- ಮತ್ತೆ , ಅಪ್ಪ ಅಲ್ಲಿ ಈಜ್ತಾ ಇಲ್ಲವೆ ?
- ಅವರ ವಿಷಯ ಬೇರೆ , ಅವರು ವಿಮೆ ಇಳಿಸಿದ್ದಾರೆ.
****
10 ನೇ ತಾರೀಕು, ಸ್ಥಳೀಯ ಬ್ಯಾಂಕ್ ನ ಜಾಹೀರಾತು - "ಕ್ಯಾಶಿಯರ್ ಬೇಕಾಗಿದ್ದಾನೆ".
11 ನೇ ತಾರೀಕು, ಗುಂಡ ಕ್ಯಾಶಿಯರ್ ಆಗಿ ಅಲ್ಲಿ ಸೇರಿಕೊಂಡ.
12 ನೇ ತಾರೀಕು, ಬ್ಯಾಂಕ್ ನ ಜಾಹೀರಾತು - "ಗುಂಡ ಬೇಕಾಗಿದ್ದಾನೆ".
****
- ರಾಮಕೃಷ್ಣ , ನೀನು ಷೇರುಪೇಟೆ ದಲ್ಲಾಳಿ ಇದ್ದೀಯ , ನನಗೆ ಏನಾದರೂ ಟಿಪ್ ಕೊಡು
- ಒಂದು ಇದೆ, ಅದು ಈಗ ಇಪ್ಪತ್ತರ ಆಸುಪಾಸು ಇದೆ , ನಾಲ್ಕೇ ತಿಂಗಳ ನಂತರ ನಲವತ್ತು ತಲುಪೋದು ಗ್ಯಾರಂಟಿ
- ಹೌದಾ ? ಏನದು ?
- ಟೆಂಪರೇಚರ್ರು !
****
-ಏನಪ್ಪಾ , ಕೆಲಸ ಹುಡುಕುತ್ತಾ ಇದ್ದೀಯಾ ?
- ಕೆಲಸಕ್ಕಿಂತ ನನಗೆ ಬೇಕಾಗಿರೋದು ನೌಕರಿ !
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಹೊಸ ನಗೆಹನಿ- ೫೩ ನೇ ಕಂತು
ಹೊಸ ನಗೆಹನಿ- ೫೧ ನೇ ಕಂತು
ಈ ನಗೆಹನಿಗಳನ್ನ ಈಗಾಗಲೇ ಕೇಳಿದ್ದರೆ.. (50ನೇ ಕಂತು)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!